
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ತರಬೇತಿ ಸೆಮಿನಾರ್‌ನಲ್ಲಿ ಹಬೀಬ್, ಕೂದಲು ಒಣಗಿದೆ ಎಂದು ಹೇಳುತ್ತಾ ಮಹಿಳೆಯ ತಲೆಗೂದಲಿನ ಮೇಲೆ ಎಲ್ಲರ ಮುಂದೆಯೇ ಉಗುಳಿದ್ದಾರೆ.
ಅವರ ಉಗುಳಿನಲ್ಲಿ ಶಕ್ತಿ ಇದೆ ಎಂದು ತಮಾಷೆಯಾಗಿ ಹೇಳುವುದೂ ಕೇಳಿಬರುತ್ತಿದೆ. ಆದರೆ ಸದ್ಯಕ್ಕೆ, ವಿಡಿಯೋದ ಸತ್ಯಾಸತ್ಯತೆ ಮತ್ತು ಯಾವಾಗ ನಡೆದಿದೆ ಎಂಬ ಬಗ್ಗೆ ಇನ್ನೂ ಕೂಡ ಖಚಿತವಾಗಿ ತಿಳಿಯಲು ಸಾಧ್ಯವಾಗಿಲ್ಲ.
ಮಹಿಳೆಯೊಬ್ಬರು ವೇದಿಕೆಯ ಮೇಲೆ ಸಲೂನ್ ಕುರ್ಚಿಯ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ತರಬೇತಿ ಸೆಮಿನಾರ್‌ನಲ್ಲಿ ಹಾಜರಿದ್ದ ಜನರಿಗೆ ಹೇರ್ ಕಟಿಂಗ್ ಸಲಹೆಗಳನ್ನು ನೀಡಿದ್ದಾರೆ. ಕೂದಲು ಕೊಳಕಾಗಿದೆ, ಏಕೆ ಕೊಳಕಾಗಿದೆ..? ಏಕೆಂದರೆ ತಾನು ಶಾಂಪೂ ಬಳಸಿಲ್ಲ. ಎಚ್ಚರಿಕೆಯಿಂದ ಆಲಿಸಿ, ನಿಮ್ಮ ಬಳಿ ನೀರಿಲ್ಲದಿದ್ದರೆ ನೀರಿನ ಕೊರತೆಯಿದ್ದರೆ ಈ ರೀತಿ ಮಾಡಬಹುದು ಎಂದ ಹಬೀಬ್, ಮಹಿಳೆಯ ತಲೆಯ ಮೇಲೆ ಉಗುಳಿದ್ದಾರೆ. ಈ ವೇಳೆ ನೆರೆದಿದ್ದವರು ಚಪ್ಪಾಳೆ ತಟ್ಟಿ ನಕ್ಕಿದ್ದಾರೆ.
ವಿಡಿಯೋದಲ್ಲಿರುವ ಮಹಿಳೆಯನ್ನು ಬರೌತ್ ನಿವಾಸಿ ಪೂಜಾ ಗುಪ್ತಾ ಎಂದು ಗುರುತಿಸಲಾಗಿದೆ. ಅವಮಾನಕರ ಅನುಭವವನ್ನು ಹಂಚಿಕೊಂಡಿರುವ ಪೂಜಾ, ತನ್ನ ಕೂದಲಿನ ಮೇಲೆ ಜಾವೆಬ್ ಹಬೀಬ್ ಉಗುಳಿದ್ದಕ್ಕೆ ಬೇಸರ ಹೊರಹಾಕಿದ್ದಾರೆ. ರೋಡ್‌ಸೈಡ್ ಕೇಶ ವಿನ್ಯಾಸಕರಿಂದ ಬೇಕಾದ್ರೂ ಕ್ಷೌರ ಮಾಡಿಸುತ್ತೇನೆ, ಆದರೆ ಜಾವೇದ್ ಹಬೀಬ್ ನಿಂದ ಕ್ಷೌರ ಮಾಡಿಸಲ್ಲ ಎಂದು ಹೇಳಿದ್ದಾರೆ.