alex Certify ಮಹಿಳೆಯ ಹೊಟ್ಟೆಯಲ್ಲಿ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ಹೊಟ್ಟೆಯಲ್ಲಿ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶ..!

ಸಿ ಸೆಕ್ಷನ್​ ಮೂಲಕ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೇಳೆಯಲ್ಲಿ ಆಕೆಯ ಹೊಟ್ಟೆಯಲ್ಲಿಯೇ ಹತ್ತಿಯನ್ನು ಬಿಟ್ಟು ಹೊಲಿಗೆ ಹಾಕಿದ ವಿಲಕ್ಷಣ ಘಟನೆಯೊಂದು ಗುರುಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ವೈದ್ಯರ ಮೇಲೆ ಎಫ್​ಐಆರ್​ ದಾಖಲಿಸುವಂತೆ ಗುರುಗ್ರಾಮ್​ ಕೋರ್ಟ್ ಆದೇಶ ನೀಡಿದೆ.

ಸೆಕ್ಟರ್​ 12ರಲ್ಲಿರುವ ಶಿವ ಆಸ್ಪತ್ರೆ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಲು ಪೊಲೀಸರು ನಿರಾಕರಿಸಿದ ಬಳಿಕ ಮಹಿಳೆಯ ಪತಿ ಗುರುಗ್ರಾಮ್​​ ಮೆಟ್ರೋಪಾಲಿಟನ್ಸ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಆಲಿಸಿದ ಕೋರ್ಟ್​ ಆಸ್ಪತ್ರೆ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದೆ.
ಮಹಿಳೆಯ ಪತಿ ದಿವಸ್​ ರೈ ದಾರ್ಜೆಲಿಂಗ್​ ಮೂಲದವರಾಗಿದ್ದು ತಮ್ಮ ಪತ್ನಿ ಸ್ವಸ್ತಿಕಾ ಜೊತೆಯಲ್ಲಿ ಸಿಕಂದರಾಪುರದಲ್ಲಿ ವಾಸವಿದ್ದರು. ಸ್ವಸ್ತಿಕಾ ಏಪ್ರಿಲ್​ 2020ರಲ್ಲಿ ಗರ್ಭಿಣಿಯಾಗಿದ್ದರು. ಅದು ಕೋವಿಡ್ ಲಾಕ್​ಡೌನ್​ ಸಮಯವಾಗಿದ್ದರಿಂದ ದಿವಸ್​ ರೈ ತಮ್ಮ ಕೆಲಸವನ್ನೂ ಕಳೆದುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ದಿವಸ್​ ಬಳಿಯಲ್ಲಿ ಹಣವಿಲ್ಲದ ಕಾರಣ ಪತ್ನಿಯನ್ನು ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಇಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ವಸ್ತಿಕಾರನ್ನು ಸೆಕ್ಟರ್​ 12ರಲ್ಲಿರುವ ಶಿವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು.
ಅಂಗನವಾಡಿ ಕಾರ್ಯಕರ್ತೆಯರ ಸಲಹೆ ಮೇರೆಗೆ ನಾನು ಪತ್ನಿಯನ್ನು ಶಿವ ಆಸ್ಪತ್ರೆಗೆ ದಾಖಲು ಮಾಡಿದ್ದೆ. ವೈದ್ಯರು ನವೆಂಬರ್​​ 16, 2020ರಂದು ಪತ್ನಿಗೆ ಸಿ ಸೆಕ್ಷನ್​ ಮೂಲಕ ಹೆರಿಗೆ ಮಾಡಿದರು. ನಮಗೆ ಹೆಣ್ಣು ಮಗು ಜನಿಸಿತ್ತು. ಇದಕ್ಕಾಗಿ ಆಸ್ಪತ್ರೆಯವರು ನನಗೆ 30 ಸಾವಿರ ಚಾರ್ಜ್ ಮಾಡಿದ್ದರು ಎಂದು ದಿವಸ್​​ ರೈ ಹೇಳಿದ್ದಾರೆ.
ಹೆರಿಗೆ ಬಳಿಕ ಸ್ವಸ್ತಿಕಾರಿಗೆ ಹೊಟ್ಟೆ ನೋವು ಆರಂಭವಾಗಿತ್ತು. ಹೊಟ್ಟೆ ಊದಿಕೊಂಡಿದ್ದು ಮಾತ್ರವಲ್ಲದೇ ಕೆಂಪಾದ ಕಲೆಗಳು ಕಾಣಿಸತೊಡಗಿದವು. ಕೂಡಲೇ ಪತ್ನಿಯನ್ನು ಅದೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಸ್ವಸ್ತಿಕಾರಿಗೆ ಕೆಲವು ವಿಟಾಮಿನ್​ ಮಾತ್ರೆಗಳನ್ನು ನೀಡಿ ವಾಪಸ್​ ಕಳುಹಿಸಿದ್ದರು.
ಆದರೆ ಶಿವ ಆಸ್ಪತ್ರೆಯಲ್ಲಿ ನೀಡಿದ ಯಾವುದೇ ಮಾತ್ರೆಗಳು ಕೆಲಸ ಮಾಡಲೇ ಇಲ್ಲ. ಹೀಗಾಗಿ ರೈ ತನ್ನ ಪತ್ನಿಯನ್ನು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸಿಟಿ ಸ್ಕ್ಯಾನ್​ ಮಾಡಿಸಿದ್ದ ವೇಳೆಯಲ್ಲಿ ಸ್ವಸ್ತಿಕಾ ಹೊಟ್ಟೆಯಲ್ಲಿ ವೈದ್ಯರು ಹತ್ತಿಯನ್ನು ಹಾಗೆಯೇ ಬಿಟ್ಟಿದ್ದಾರೆ ಎಂದು ತಿಳಿದುಬಂದಿತ್ತು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...