ತುಮಕೂರು : ಜಿಲ್ಲೆಯಲ್ಲಿ ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು, ಮಹಿಳೆಯ ಶವ ಹುಡುಕಲು ಹೇಮವಾತಿ ನಾಲೆಗೆ ತೆರಳಿದ್ದರು. ಆದರೆ, ಅಲ್ಲಿ ಮಹಿಳೆಯ ಶವದ ಬದಲಾಗಿ ವೃದ್ಧನ ಶವ ಪತ್ತೆಯಾಗಿದ್ದು, ಪೊಲೀಸರಿಗೆ ಶಾಕ್ ಆಗಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನೂ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದಾರೆ.
ಆಂಗ್ಲರನ್ನು ಬಗ್ಗು ಬಡಿದು ಸರಣಿ ಕೈ ವಶ ಮಾಡಿಕೊಂಡ ಆಸ್ಟ್ರೇಲಿಯಾ!
ನಗರದಲ್ಲಿ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಕಲಾವತಿ ಎಂಬ ಮಹಿಳೆಯ ಕೊಲೆ ನಡೆದಿದ್ದು, ಗಜೇಂದ್ರ ಎಂಬ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಬಂಧಿತ ವ್ಯಕ್ತಿ ಕೊಲೆ ಮಾಡಿರುವಾದಾಗಿ ಒಮ್ಮೆ ಹೇಳಿದರೆ, ಮತ್ತೊಮ್ಮೆ ಹೇಮಾವತಿ ನಾಲೆಗೆ ಮಹಿಳೆಯೇ ಹಾರಿದ್ದಾರೆ ಎಂದು ಹೇಳಿಕೆ ನೀಡಿದ್ದ.
ಹೀಗಾಗಿ ಇತನ ವ್ಯತಿರಿಕ್ತ ಹೇಳಿಕೆಯಿಂದ ಕಂಗಾಲಾಗಿದ್ದ ಪೊಲೀಸರು, ಮಹಿಳೆಯ ಶವ ಪತ್ತೆಯಾದರೆ, ಎಲ್ಲವೂ ಬಯಲಿಗೆ ಬರಲಿದೆ ಎಂದು ಹೇಮಾವತಿ ನಾಲೆಯಲ್ಲಿ ಶವ ಹುಡುಕಾಟ ನಡೆಸಿದ್ದರು. ಆದರೆ, ಈ ಸಂದರ್ಭದಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದೆ.
ಸದ್ಯ ಈ ವೃದ್ಧನ ಮೃತದೇಹದ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಈ ಕುರಿತು ಕೂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಹಣದ ವಿಚಾರಕ್ಕೆ ಕಲಾವತಿಯನ್ನು ಗಜೇಂದ್ರ ಕೊಲೆ ಮಾಡಿದ್ದಾನೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದರು. ಈ ವಿಚಾರವಾಗಿಯೇ ಪೊಲೀಸರು ತನಿಖೆ ಕೈಗೊಂಡಾಗ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.