ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಯಾವುದು ಪವಿತ್ರ ಹಾಗೂ ಯಾವುದು ಅಪವಿತ್ರ ಎಂಬುದನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಸ್ತ್ರೀ ಬಗ್ಗೆಯೂ ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ.
ಸಿಂಹದ ಬಳಿ ತೆರಳಿ ಐ ಲವ್ ಯೂ ಎಂದ ಮಹಿಳೆ..! ವಿಚಿತ್ರ ವರ್ತನೆ ಕಂಡು ದಂಗಾದ ಮೃಗಾಲಯ ಸಿಬ್ಬಂದಿ
ಯಾರ ಮನೆಯಲ್ಲಿ ಸ್ತ್ರೀಗೆ ಗೌರವ ನೀಡಲಾಗುತ್ತದೆಯೋ ಆ ಮನೆಯಲ್ಲಿ ಸಂತೋಷ, ಸುಖ ಸದಾ ನೆಲೆಸಿರುತ್ತದೆ. ಯಾರ ಮನೆಯಲ್ಲಿ ಸ್ತ್ರೀಗೆ ಅಗೌರವ ತೋರಲಾಗುತ್ತದೆಯೋ ಆ ಮನೆಯಲ್ಲಿ ಭಗವಂತ ನೆಲೆಸುವುದಿಲ್ಲವಂತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಾಹ್ಮಣನ ಪಾದ ಪವಿತ್ರವಾದದ್ದು ಎನ್ನಲಾಗಿದೆ.
ಹಸುವಿನ ಹಿಂಭಾಗಕ್ಕೆ ವಿಶೇಷ ಪೂಜೆ ಮಾಡಲಾಗುತ್ತದೆ. ಕುದುರೆ ಬಾಯಿಯನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಹಾಗೆ ಮಹಿಳೆಯ ದೇಹದ ಎಲ್ಲ ಭಾಗವೂ ಪವಿತ್ರವಂತೆ. ಮಹಿಳೆ ದೇಹವೂ ಶುದ್ಧ. ಹಾಗಾಗಿ ಮಹಿಳೆಯನ್ನು ಗೌರವದಿಂದ ಕಾಣಬೇಕು. ಎಲ್ಲಿ ಮಹಿಳೆ ಪೂಜೆ ನಡೆಯುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾರೆಂದು ಸಂಸ್ಕೃತದಲ್ಲಿ ಹೇಳಲಾಗಿದೆ. ಮಹಿಳೆಗೆ ಹಿಂಸೆ ನೀಡುವ, ಮೋಸ ಮಾಡುವ, ಕಿರುಕುಳ ನೀಡುವ ಸ್ಥಳದತ್ತ ದೇವರು ತಿರುಗಿಯೂ ನೋಡುವುದಿಲ್ಲವಂತೆ.