
ಈ ಉಡುಪಿನ ವಿಚಾರವಾಗಿ ಉಂಟಾಗಿದ್ದ ಟ್ರೋಲ್ಗಳ ಬಗ್ಗೆ ಅಸಮಾಧಾನ ಹೊರಹಾಕಿರುವ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಟಿಪ್ಪಣಿಯೊಂದನ್ನೇ ಬರೆದಿದ್ದಾರೆ. ಮಹಿಳೆಯನ್ನು ಆಕೆ ಧರಿಸಿರುವು ಉಡುಪಿನ ಕಂಠರೇಖೆಯ ಆಧಾರದ ಮೇಲೆ ನಿರ್ಣಯಿಸುವುದನ್ನು ನಿಲ್ಲಿಸಿ ಎಂದು ನಟಿ ಹೇಳಿದ್ದಾರೆ.
ಒಬ್ಬ ಮಹಿಳೆಯಾಗಿ, ವ್ಯಕ್ತಿತ್ವವನ್ನು ನಿರ್ಣಯಿಸುವುದರ ಅರ್ಥವೇನು ಎಂಬುದರ ಬಗ್ಗೆ ನಾನು ಜ್ಞಾನವನ್ನು ಹೊಂದಿದ್ದೇನೆ. ಮಹಿಳೆಯು ಧರಿಸುವ ಬಟ್ಟೆ, ಜನಾಂಗ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಆಕೆಯ ಚರ್ಮದ ಬಣ್ಣಗಳನ್ನು ನೋಡಿ ಆಕೆಯನ್ನು ನಿರ್ಧರಿಸಲಾಗುತ್ತದೆ. ಒಬ್ಬರು ಧರಿಸುವ ಬಟ್ಟೆಯ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಧರಿಸುವುದು ಒಬ್ಬರು ಮಾಡಬಹುದಾದ ಅತ್ಯಂತ ಸುಲಭದ ಕೆಲಸವಾಗಿದೆ ಎಂದು ಬರೆದಿದ್ದಾರೆ.
ನಾವೀಗ 2022ನೇ ಇಸ್ವಿಯಲ್ಲಿದ್ದೇವೆ. ಹೀಗಾಗಿ ನಾನು ಮಹಿಳೆಯು ಧರಿಸುವ ಬಟ್ಟೆಯ ಕಂಠರೇಖೆ ಎಷ್ಟು ಆಳವಾಗಿದೆ ಹಾಗೂ ಆ ಧಿರಿಸು ಎಷ್ಟು ಗಿಡ್ಡವಾಗಿದೆ ಎಂಬುದರ ಆಧಾರದ ಮೇಲೆ ಆಕೆಯ ವ್ಯಕ್ತಿತ್ವವನ್ನು ಅಳೆಯುವುದನ್ನು ನಿಲ್ಲಿಸಬಹುದೇ..? ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳುವತ್ತ ಗಮನಹರಿಸಬಹುದೇ..? ಎಂದು ಟ್ರೋಲಿಗರಿಗೆ ಪ್ರಶ್ನೆ ಮಾಡಿದ್ದಾರೆ.