ಆನೆಗಳು ಬಹಳ ಮುಗ್ಧ ಪ್ರಾಣಿ ಎಂದೇ ಹೆಸರುವಾಸಿಯಾಗಿದೆ. ಇವುಗಳ ಮರಿಗಳಂತೂ ಬಹಳ ತುಂಟಾಟವಾಡುತ್ತವೆ. ಆನೆ ಮರಿಗಳು ಮನುಷ್ಯರ ಮಕ್ಕಳಂತೆಯೇ ಆಟ, ತುಂಟಾಟಗಳನ್ನು ಆಡುತ್ತವೆ. ಇದೀಗ ಥೈಲ್ಯಾಂಡ್ನಲ್ಲಿ ಮರಿ ಆನೆ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಮೇಗನ್ ಮಿಲನ್ ಎಂಬಾಕೆಯು ಚೈ ಲಾಯ್ ಆರ್ಕಿಡ್ನಲ್ಲಿರುವ ಚಿಯಾಂಗ್ ಮಾಯ್ ಆನೆ ಬಿಡಾರಕ್ಕೆ ಭೇಟಿ ನೀಡಿದ್ರು. ಅಲ್ಲಿ ಆನೆಗಳೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ರು. ಆದರೆ, ಮರಿಯಾನೆಯು ಇದರಿಂದ ಖುಷಿಗೊಂಡಂತೆ ತೋರಿಲ್ಲ. ಅದೇನಾಯ್ತೋ ಏನೋ ಏಕಾಏಕಿ ಮಹಿಳೆಯ ಮೇಲೆ ದಾಳಿ ನಡೆಸಿದೆ. ಆಕೆಯನ್ನು ನೆಲಕ್ಕೆ ಕೊಡವಿ ಹಾಕಿ ಉರುಳಾಡಿಸಿದೆ.
ಮರಿಯಾನೆಯು ಮಹಿಳೆಯನ್ನು ಅತ್ತಿಂದಿತ್ತ ಉರುಳಾಡಿಸಿದೆ. ಕೊನೆಗೆ ದೊಡ್ಡಾನೆ ಬಿಡಿಸಲು ಬರಬೇಕಾಯ್ತು. ದೊಡ್ಡಾನೆ ಮಹಿಳೆಯ ರಕ್ಷಣೆಗೆ ಮುಂದಾಗಿದ್ದು, ಮರಿಯಾನೆಯನ್ನು ದೂರ ಹೋಗುವಂತೆ ಮಾಡಿದೆ. ಈ ವಿಡಿಯೋವನ್ನು ಸ್ವತಃ ಮೇಗನ್ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮರಿಯಾನೆಯ ತುಂಟಾಟದಿಂದ ತನಗೇನೂ ನೋವಾಗಿಲ್ಲ ಎಂದು ಮೇಗನ್ ತಿಳಿಸಿದ್ದಾರೆ.