ಕಿಚನ್ ಗಾರ್ಡನ್ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಇದು ಮನೆಯಲ್ಲೇ ಇರುವ ಮಹಿಳೆಯರಿಗೆ ಅಡುಗೆಗೆ ಸಾಮಾಗ್ರಿಗಳನ್ನು ಒದಗಿಸುವುದು ಮಾತ್ರವಲ್ಲ, ನೆಮ್ಮದಿಯನ್ನೂ ನೀಡುತ್ತದೆ.
ಮನೆಯಂಗಳದಲ್ಲಿ ಟೊಮೆಟೊ, ಮೆಣಸು, ಬದನೆ, ಸೊಪ್ಪುಗಳು ಮೊದಲಾದ ತರಕಾರಿಗಳನ್ನು ಬೆಳೆಯುವುದರಿಂದ ನಿಮ್ಮ ಗಾರ್ಡನ್ ನ ಅಂದವೂ ಹೆಚ್ಚುತ್ತದೆ. ಇದನ್ನೊಂದು ಹವ್ಯಾಸವಾಗಿ ನೀವು ಮುಂದುವರಿಸಬಹುದು.
ಅಡುಗೆ ಮನೆಯಲ್ಲೇ ಉಳಿಯುವ ವ್ಯರ್ಥ ಪದಾರ್ಥಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಸಾಕು, ಈ ಗಾರ್ಡನ್ ಗೆ ಅನ್ಯ ರಾಸಾಯನಿಕ ಗೊಬ್ಬರಗಳ ಅಗತ್ಯವೂ ಬರದು. ಬೇಕಿದ್ದರೆ ಸಾವಯವ ಗೊಬ್ಬರ ಬಳಸಿ.
ಕಿಚನ್ ಗಾರ್ಡನ್ ಮಾಡುವುದರಿಂದ ಪ್ರಕೃತಿಯೊಂದಿಗಿನ ಒಡನಾಟ ಹೆಚ್ಚುತ್ತದೆ. ದೈಹಿಕ ಮತ್ತು ಮಾನಸಿಕ ಪ್ರಯೋಜನಗಳೊಂದಿಗೆ, ತಾಳ್ಮೆ, ಸಹನೆ ನಿಮ್ಮದಾಗುತ್ತದೆ. ಖಿನ್ನತೆಯಂಥ ಸಮಸ್ಯೆಗಳೂ ನಿಮ್ಮಿಂದ ದೂರವಾಗುತ್ತವೆ.