alex Certify ‘ಮಹಿಳೆಯರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಲು ಪೂರ್ವಜರ ದುಶ್ಚಟಗಳೇ ಕಾರಣ’: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಹಿಳೆಯರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಲು ಪೂರ್ವಜರ ದುಶ್ಚಟಗಳೇ ಕಾರಣ’: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಪ್ರೌಢಾವಸ್ಥೆಗೂ ಮುನ್ನ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡಲು ಆರಂಭಿಸಿದ್ದರೆ ಇವರ ಮೊಮ್ಮಕ್ಕಳು ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರ ದೇಹದಲ್ಲಿ ಕೊಬ್ಬು ಹೆಚ್ಚಿ ನ ಪ್ರಮಾಣದಲ್ಲಿ ಕಂಡು ಬರುತ್ತದೆ. ಬ್ರಿಟನ್​​ನಲ್ಲಿ 90ರ ದಶಕದ 30 ವರ್ಷ ಪ್ರಾಯದ ಮಹಿಳೆಯರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಈ ಹೊಸ ವಿಚಾರವು ಬಹಿರಂಗವಾಗಿದೆ.

ಇದೇ ವಿಚಾರವಾಗಿ ಈ ಹಿಂದೆ ನಡೆಸಲಾದ ಅಧ್ಯಯನಗಳಲ್ಲಿ ಧೂಮಪಾನದಲ್ಲಿರುವ ಕೆಲವು ರಾಸಾಯನಿಕ ವಸ್ತುಗಳು ಪುರುಷರ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಸಾಬೀತಪಡಿಸಿವೆ. ಇದನ್ನು ಹೊರತುಪಡಿಸಿ ಇದೀಗ ನಡೆಸಲಾದ ಅಧ್ಯಯನದಲ್ಲಿ ಹೊಸದೊಂದು ವಿಚಾರ ಬೆಳಕಿಗೆ ಬಂದಿದೆ.

ಸೈಂಟಿಫಿಕ್​ ರಿಪೋರ್ಟ್ಸ್​​ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಂದೆಯ ತಂದೆಯು ಪ್ರೌಡಾವಸ್ಥೆಗೂ ಮುನ್ನ ಧೂಮಪಾನ ಮಾಡಲು ಆರಂಭಿಸಿದರೆ ಅವರ ಮೊಮ್ಮಕ್ಕಳಲ್ಲಿ ಅಂದರೆ ಕೇವಲ ಹೆಣ್ಣು ಮೊಮ್ಮಕ್ಕಳಲ್ಲಿ ಮಾತ್ರ ಹೆಚ್ಚಿನ ಕೊಬ್ಬು ಕಂಡುಬರುತ್ತದೆ ಎಂದು ತಿಳಿದುಬಂದಿದೆ.

ಈ ಸಂಶೋಧನೆಯಲ್ಲಿ ನಮಗೆ 2 ಪ್ರಮುಖ ಫಲಿತಾಂಶಗಳು ತಿಳಿದುಬಂದಿದೆ. ಮೊದಲನೆಯದಾಗಿ ಪ್ರೌಢಾವಸ್ಥೆಗೂ ಮುನ್ನ ಯುವಕನು ಮಾಡುವ ಚಟಗಳು ಆತನ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರಬಲ್ಲದು. ಅಥವಾ ಹೆಣ್ಣು ಮಕ್ಕಳು ಅಧಿಕ ತೂಕವನ್ನು ಹೊಂದಲು ಅವರ ಪೂರ್ವಜರ ಜೀವನ ಶೈಲಿ ಕೂಡ ಕಾರಣ ಇರಬಹುದು ಎಂದು ಹೇಳಬಹುದಾಗಿದೆ ಎಂದು ವರದಿಯ ಪ್ರಮುಖ ಲೇಖಕ ಪ್ರೊಫೆಸರ್​ ಜೀನ್​ ಗೋಲ್ಡಿಂಗ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...