ಮಹಿಳೆಯರ ಗರ್ಭಪಾತಕ್ಕೆ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಲ್ಲ ಮಹಿಳೆಯರು ಸುರಕ್ಷಿತ ಹಾಗೂ ಕಾನೂನು ಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದು, ಅತ್ಯಾಚಾರವೆಂದರೆ ಒಪ್ಪಿಗೆ ಇಲ್ಲದ ಲೈಂಗಿಕ ಸಂಬಂಧ ಎಂಬುದು ವಾಸ್ತವ ಸಂಗತಿ ಎಂದು ತಿಳಿಸಿದೆ.
ಅವಿವಾಹಿತ ಅಥವಾ ವಿವಾಹಿತ ಮಹಿಳೆ ಬಲವಂತದ ಗರ್ಭಧಾರಣೆ ಹೊಂದಿದ ಸಂದರ್ಭದಲ್ಲಿ ಇದನ್ನು ಅತ್ಯಾಚಾರ ಎಂದು ಪರಿಗಣಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಆಗ ಗರ್ಭಪಾತ ಮಾಡಿಸಿಕೊಂಡರೆ ಅದು ಕಾನೂನು ಬದ್ಧ ಎಂದು ಹೇಳಿದೆ.
ಪ್ರಕರಣ ಒಂದರ ವಿಚಾರಣೆ ಸಂದರ್ಭದಲ್ಲಿ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ತೀರ್ಪಿನ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.