ಸಂಭೋಗ ಸಮಯದಲ್ಲಿ ಹೆಚ್ಚು ಸುಖ ಅನುಭವಿಸಲು ಹಾಗೂ ಪರಾಕಾಷ್ಠೆ ತಲುಪಲು ಮಹಿಳೆಯರು ಕೆಲ ವೈಬ್ರೇಟರ್ ಹಾಗೂ ಸೆಕ್ಸ್ ಟಾಯ್ ಗಳನ್ನು ಬಳಸ್ತಾರೆ. ಇದು ಸಂಭೋಗ ಸುಖವನ್ನು ದುಪ್ಪಟ್ಟು ಮಾಡುತ್ತೆ ನಿಜ. ಆದ್ರೆ ಇದು ಖಾಸಗಿ ಅಂಗಕ್ಕೆ ಅಪಾಯವನ್ನುಂಟು ಮಾಡುತ್ತದೆ. ಮಹಿಳೆಯರ ಖಾಸಗಿ ಅಂಗ ಕೆಲವೊಂದು ವಸ್ತುಗಳಿಂದ ದೂರವಿರಬೇಕು.
ಸಂಭೋಗ ಸುಖಕ್ಕಾಗಿ ಮಹಿಳೆಯರು ಬಳಸುವ ಸೆಕ್ಸ್ ಟಾಯ್ ಮಹಿಳೆಯರಿಗೆ ಅಪಾಯಕಾರಿ. ಅದ್ರಲ್ಲಿರುವ ರಬ್ಬರ್, ಖಾಸಗಿ ಅಂಗದ ಸೋಂಕಿಗೆ ಕಾರಣವಾಗುತ್ತದೆ. ಸಿಲಿಕಾನ್ ಅಥವಾ ಹಾರ್ಡ್ ಪ್ಲಾಸ್ಟಿಕ್ ನಿಂದ ಮಾಡಿದ ಸೆಕ್ಸ್ ಟಾಯ್ ಬಳಸಬಹುದಂತೆ. ಆದ್ರೆ ಅದು ಮುರಿಯದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಖಾಸಗಿ ಅಂಗಕ್ಕೆ ಎಂದೂ ಬಣ್ಣ ಹಚ್ಚಬಾರದು. ಕೂದಲಿಗೆ ಬಣ್ಣ ಹಚ್ಚುವುದು ಬೇಡವೇ ಬೇಡ.ಅದ್ರಲ್ಲಿರುವ ರಾಸಾಯನಿಕ ವಜೈನಾ ಸೇರುವುದ್ರಿಂದ ಸೋಂಕು ತಗಲುತ್ತದೆ. ಇದ್ರಿಂದ ಉರಿ ಹಾಗೂ ತುರಿಕೆ ಕಾಣಿಸಿಕೊಳ್ಳುತ್ತದೆ.
ಲೂಬ್ರಿಕಂಟ್ ಬಳಕೆಯಿಂದ ಸೆಕ್ಸ್ ಲೈಫ್ ವಿಶೇಷವಾಗಿರುತ್ತದೆ. ಆದ್ರೆ ಇದು ನಿಮ್ಮ ಖಾಸಗಿ ಅಂಗಕ್ಕೆ ಅಪಾಯಕಾರಿ. ತೈಲ ಆಧಾರಿತ ಲೂಬ್ರಿಕಂಟ್ ತುಂಬಾ ದಪ್ಪವಾಗಿರುವ ಕಾರಣ ದೇಹದಿಂದ ಸುಲಭವಾಗಿ ಹೊರಹೋಗುವುದಿಲ್ಲ. ಇದ್ರಿಂದ ತುರಿಕೆ ಕಾಣಿಸಿಕೊಳ್ಳುತ್ತದೆ.