ಮಹಿಳೆಯರು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಹೆಚ್ಚು ಧರಿಸಲು ಇಷ್ಟಪಡುತ್ತಾರೆ. ಈ ಆಭರಣಗಳು ಕಳೆಯುವುದು ತುಂಬಾ ಕೆಟ್ಟ ಸಂಕೇತ.
ಜ್ಯೋತಿಷ್ಯದ ಪ್ರಕಾರ, ಚಿನ್ನ ಗುರುವಿಗೆ ಸಂಬಂಧಿಸಿದ್ದು. ಚಿನ್ನದ ಆಭರಣಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತು ಅವುಗಳನ್ನು ಕಳೆದುಕೊಂಡರೆ ಗುರು ಗ್ರಹ ದೋಷಕ್ಕೆ ಕಾರಣವಾಗುತ್ತದೆ. ಚಿನ್ನವನ್ನು ಕಳೆದುಕೊಳ್ಳುವುದು ಮತ್ತು ಚಿನ್ನ ಸಿಗುವುದು ಎರಡೂ ಕೆಟ್ಟ ಸಂಕೇತ.
ಮಹಿಳೆಯ ಮೂಗಿನ ನತ್ತು ಕಳೆದು ಹೋಗುವುದು ಶುಭ ಸಂಕೇತವಲ್ಲ. ಭವಿಷ್ಯದಲ್ಲಿ ಅವಮಾನ ಎದುರಾಗಲಿದೆ ಎಂಬುದರ ಸೂಚನೆ.
ವಿವಾಹಿತ ಮಹಿಳೆಯ ಮಂಗಳಸೂತ್ರ ಕಳೆದು ಹೋಗುವುದು ಅಶುಭ ಸಂಕೇತ. ಮಂಗಳಸೂತ್ರ ಕಳೆದ್ರೆ ಗಂಡನ ಆರೋಗ್ಯದಲ್ಲಿ ಸಮಸ್ಯೆಯಾಗಲಿದೆ ಎಂದರ್ಥ.
ಮಹಿಳೆಯ ಕಿವಿಯೋಲೆಗಳು ಕಳೆದು ಹೋದರೆ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಕೆಟ್ಟ ಸುದ್ದಿಗಳು ಬರಲಿವೆ ಎಂದು ಹೇಳಲಾಗುತ್ತದೆ.
ಮಹಿಳೆಯ ಚಿನ್ನದ ಬಳೆಗಳು ಕಳೆದು ಹೋದರೆ ಮಹಿಳೆ ಯಾವುದೇ ಕಾರಣವಿಲ್ಲದೆ ಕುಟುಂಬದಲ್ಲಿ ಅವಮಾನಕ್ಕೊಳಗಾಗುತ್ತಾಳೆ ಎಂಬ ಸಂಕೇತ.
ಬೆಳ್ಳಿ ಕಾಲುಗೆಜ್ಜೆ ಕಳೆದ್ರೆ ಕುಟುಂಬದಲ್ಲಿ ಯಾರಿಗಾದರೂ ಗಾಯವಾಗುವ ಸಾಧ್ಯತೆಗಳಿವೆ ಎಂದ ಸಂಕೇತ. ದೊಡ್ಡ ಸಮಸ್ಯೆ, ನಷ್ಟ ಎದುರಾಗುವ ಸಾಧ್ಯತೆಯಿರುತ್ತದೆ.