ಹೆಚ್ಚಾಗಿ ಎರಡನೇ ಹಂತದ ನಗರಗಳಲ್ಲಿ ವಾಸಿಸುವ ಮಹಿಳೆಯರಲ್ಲಿ 50 ಪ್ರತಿಶತ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿಲ್ಲ ಎಂಬ ಮಾಹಿತಿಯು ಸಮೀಕ್ಷೆಯೊಂದರಲ್ಲಿ ಹೊರಬಿದ್ದಿದೆ.
ಸುಮಾರು 33 ಪ್ರತಿಶತ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಜೀವನ ವೆಚ್ಚ ಒಂದು ಸವಾಲಾಗಿದೆ ಎಂದು ಹೇಳಿದ್ದಾರೆ. ಪ್ರತಿ ನಾಲ್ವರು ಮಹಿಳೆಯರು ಕೌಟುಂಬಿಕ ನಿರ್ಬಂಧ ಹಾಗೂ ಮಾರ್ಗದರ್ಶನದ ಕೊರತೆಯನ್ನು ತಡೆಗೋಡೆಯಾಗಿ ಸೂಚಿಸಿದ್ದಾರೆ ಎಂದು ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಸಮೀಕ್ಷೆಯು ಹೇಳಿದೆ.
ಸುಮಾರು 53 ಪ್ರತಿಶತ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಪೂರ್ವಭಾವಿ ಕ್ರಮಗಳಾಗಿ ಉಳಿತಾಯ ಮತ್ತು ಹೂಡಿಕೆ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಆದರೆ ಕೇವಲ 38 ಪ್ರತಿಶತ ಮಹಿಳೆಯರು ಮಾತ್ರ ಆರ್ಥಿಕವಾಗಿ ಸ್ವತಂತ್ರರಾಗಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಮೆ ಮಾಡಿಸಿಕೊಂಡಿದ್ದಾರೆ.
ಎಸ್‌ಬಿಐ ಜನರಲ್ ಇನ್ಶೂರೆನ್ಸ್‌ನ ಎಂಡಿ ಮತ್ತು ಸಿಇಒ ಪಿಸಿ ಕಂಡ್‌ಪಾಲ್, ಹೆಚ್ಚಿನ ಮಹಿಳೆಯರು ಹೂಡಿಕೆ ಮತ್ತು ವಿಮೆಯಂತಹ ಹಣಕಾಸಿನ ವಿಷಯಗಳಲ್ಲಿ ಇನ್ನೂ ಸ್ವಾವಲಂಬಿಗಳಾಗಿಲ್ಲ. ವಾಸ್ತವವಾಗಿ, ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಪ್ರಯತ್ನಿಸುತ್ತಿರುವಾಗ, ಮೂರನೇ ಒಂದು ಭಾಗದಷ್ಟು ಮಹಿಳೆಯರು ಹೂಡಿಕೆ ಮತ್ತು ವಿಮೆಯ ಬಗ್ಗೆ ಸರಿಯಾದ ಮಾಹಿತಿ ಮತ್ತು ಜ್ಞಾನದ ಕೊರತೆಯನ್ನು ಹೊಂದಿದ್ದಾರೆ ಎಂದು ಹೇಳಿದರು.