ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ ನಿಯಮವಾಗಿ ಬದಲಾಗಿದೆ.
ಸೀರೆ ಅಥವಾ ಸಾಂಪ್ರದಾಯಿಕ ಉಡುಪು ಧರಿಸಿದ್ದರೆ ವೃತ್ತಾಕಾರದ ದೊಡ್ಡ ಬಿಂದಿಯನ್ನು ಇಟ್ಟುಕೊಳ್ಳುವುದು ಇಂದಿನ ಫ್ಯಾಶನ್. ಅದನ್ನು ಹಣೆಯಿಂದ ತುಸು ಮೇಲೆ ಮಧ್ಯ ಭಾಗದಲ್ಲಿ ಇಟ್ಟುಕೊಳ್ಳುತ್ತಾರೆ. ಗಾಢ ಕೆಂಪು ಬಣ್ಣದ ಬಿಂದಿ ಬಹುತೇಕ ಎಲ್ಲಾ ಬಣ್ಣದ ಸೀರೆಗಳಿಗೂ ಮ್ಯಾಚ್ ಆಗುತ್ತದೆ.
ಚೂಡಿದಾರ್ ಇಲ್ಲವೇ ಇತರ ದಿನನಿತ್ಯದ ಬಳಕೆಗಾಗಿ ತುಸು ಉದ್ದನೆಯ ಬಿಂದಿ ಹಾಕಿಕೊಳ್ಳುತ್ತಾರೆ.
ಇನ್ನು ಆಧುನಿಕ ಪಾರ್ಟಿಗಳಿಗೆ ಉಡುಪಿನ ಬಣ್ಣದ ಸಣ್ಣ, ಕಣ್ಣಿಗೆ ಕಂಡೂ ಕಾಣಿಸದ ಗುಬ್ಬಿಯಂತಹ ಬಿಂದಿ ಇಟ್ಟುಕೊಳ್ಳುತ್ತಾರೆ. ಇದು ಜೀನ್ಸ್ ನಂತಹ ಆಧುನಿಕ ಉಡುಪಿಗೂ ಹೊಂದಿಕೆಯಾಗುತ್ತದೆ.