ಎಳನೀರಿನಲ್ಲಿರೋ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೇಸಿಗೆಯಲ್ಲಂತೂ ಎಳನೀರಿನಿಂದ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಮುಖದ ಸೌಂದರ್ಯವನ್ನೂ ಡಬಲ್ ಮಾಡಬಲ್ಲ ಸಾಮರ್ಥ್ಯ ಎಳನೀರಿನಲ್ಲಿದೆ.
ಎಳನೀರಿನಲ್ಲಿ ವಿಟಮಿನ್ ಸಿ ಮತ್ತು ಪ್ರೋಟೀನ್‌ನಂತಹ ಅನೇಕ ಎಂಟಿ ಒಕ್ಸಿಡೆಂಟ್‌ಗಳಿವೆ. ಇದು ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ನಿವಾರಿಸಬಲ್ಲದು. ಎಳನೀರಿನಿಂದ ಫೇಸ್ ಮಿಸ್ಟ್ ತಯಾರಿಸಿ ಬಳಸುವುದರಿಂದ ಬೇಸಿಗೆಯಲ್ಲಿ ಕಾಡುವ ತ್ವಚೆಯ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ. ಇದನ್ನು ತಯಾರಿಸುವುದು ಕೂಡ ಬಹಳ ಸುಲಭ.
ಎಳನೀರಿನಿಂದ ಮಾಡಿದ ಫೇಸ್ ಮಿಸ್ಟ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕಣ್ಣಿನ ಕೆಳಭಾಗದಲ್ಲಿರುವ ಡಾರ್ಕ್ ಸರ್ಕಲ್‌ಗಳು ಕೂಡ ನಿವಾರಣೆಯಾಗುತ್ತವೆ. ಇದು ತ್ವಚೆಯನ್ನು ಆಳವಾಗಿ ಪೋಷಿಸುತ್ತದೆ. ಚರ್ಮವು ಪ್ರತಿದಿನ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ. ಅಷ್ಟೇ ಅಲ್ಲ ಚರ್ಮದ ಬಣ್ಣವನ್ನು ಕೂಡ ಇದು ಸುಧಾರಿಸುತ್ತದೆ.
ಎಳನೀರಿನ ಫೇಸ್ ಮಿಸ್ಟ್ ತಯಾರಿಸಲು ಒಂದು ಸೌತೆಕಾಯಿ ಮತ್ತು ಒಂದು ಕಪ್ ಎಳನೀರನ್ನು ತೆಗೆದುಕೊಳ್ಳಿ. ಮೊದಲು ಸೌತೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ತುರಿಯಿರಿ. ಸೌತೆಕಾಯಿಯ ರಸವನ್ನು ಹಿಂಡಿ ಅದನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಒಂದು ಕಪ್ ಎಳನೀರನ್ನು ಹಾಕಿ, ಅವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಫ್ರಿಜ್‌ನಲ್ಲಿ ಸಂಗ್ರಹಿಸಿ. ಮನೆಯಲ್ಲೇ ತಯಾರಿಸಿರುವ ಎಳನೀರಿನ ಫೇಸ್ ಮಿಸ್ಟ್ ಅನ್ನು ನಿಯಮಿತವಾಗಿ ಬಳಕೆ ಮಾಡಿ.