ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂಬ ಕಾರಣಕ್ಕೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೀರಾ? ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಕಡಿಮೆ ನಿದ್ದೆ ಮಾಡುವುದರಿಂದ ಬಿ ಎಮ್ ಡಿ ಅಂದರೆ ಮೂಳೆಯ ಖನಿಜ ಸಾಂದ್ರತೆ ಮತ್ತು ಆಸ್ಟಿಯೋ ಪೊರೋಸಿಸ್ ಬೆಳವಣಿಗೆಯ ಅಪಾಯವಿದೆ ಎಂದು ಸಂಶೋಧನೆಯೊಂದು ಹೇಳಿದೆ.
ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ದೆಯನ್ನು ಮಾಡುವ ಮಹಿಳೆಯರು ಬಿ ಎಮ್ ಡಿ ಸಮಸ್ಯೆಗೆ ಒಳಗಾಗಿರುವುದನ್ನು ಕಂಡು ಹಿಡಿಯಲಾಯಿತು.
ರಾತ್ರಿ ವೇಳೆ 5 ಗಂಟೆಗಿಂತ ಕಡಿಮೆ ನಿದ್ದೆ ಮಾಡುವ ಮಹಿಳೆಯರಲ್ಲಿ 22% ರಷ್ಟು ಜನ ಮೂಳೆಯ ಸಮಸ್ಯೆ ಮತ್ತು 63ರಷ್ಟು ಮಹಿಳೆಯರು ಸೊಂಟದ ಆಸ್ಟಿಯೋ ಪೊರೋಸಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸಮೀಕ್ಷೆ ಕಂಡುಹಿಡಿದಿದೆ.
ಹೀಗಾಗಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ನಿದ್ರಾಹೀನತೆ ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಮಹಿಳೆಯರು ನಿದ್ರೆಗೆಡುವ ಮುನ್ನ ಎಚ್ಚರ ವಹಿಸಿ. ರಾತ್ರಿ ಹೊತ್ತು ಏನೇ ಕಾರಣವಿರಲಿ ಹೆಚ್ಚು ನಿದ್ರೆಗೆಡಬೇಡಿ. ನಿಮ್ಮ ದೇಹಕ್ಕೆ ನಿದ್ರೆಯ ಮೂಲಕ ವಿಶ್ರಾಂತಿ ಕೊಡಿ.