ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲೊಂದು ರಹಸ್ಯಗಳಿರುತ್ತವೆ. ಅದನ್ನವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅನೇಕ ಬಾರಿ ಈ ರಹಸ್ಯಗಳನ್ನು ತಮ್ಮ ಆತ್ಮೀಯ ಸ್ನೇಹಿತರೊಂದಿಗೂ ಹೇಳಿಕೊಳ್ಳುವುದಿಲ್ಲ. ವಿಶೇಷವಾಗಿ ಮಹಿಳೆಯರು ಕೆಲವೊಂದು ರಹಸ್ಯವನ್ನು ಗುಟ್ಟಾಗಿಯೇ ಇಡುತ್ತಾರೆ. ಬಹುತೇಕ ಎಲ್ಲಾ ಮಹಿಳೆಯರು ಮರೆಮಾಡುವ ರಹಸ್ಯಗಳು ಅಥವಾ ವಿಷಯಗಳು ಯಾವುವು ಅನ್ನೋದನ್ನು ನೋಡೋಣ.
ಮದುವೆಗೂ ಮುನ್ನ ಪ್ರೇಮ ಪ್ರಕರಣಗಳಿದ್ದರೆ ಅದನ್ನ ಮಹಿಳೆಯರು ತಮ್ಮ ಗಂಡನಿಗೆ ಎಂದಿಗೂ ಹೇಳುವುದಿಲ್ಲ. ಹಳೆ ಪ್ರೀತಿಯ ವಿಚಾರ ಬಾಯ್ಬಿಟ್ಟರೆ ಸಂಬಂಧವು ಹಾಳಾಗಬಹುದು ಎಂಬ ಆತಂಕ ಸಹಜವಾಗಿಯೇ ಅವರಿಗೆ ಇರುತ್ತದೆ. ಸಂಭೋಗದ ಸಮಯದಲ್ಲಿ ಮಹಿಳೆಯರು ಪರಾಕಾಷ್ಠೆ ಪಡೆಯದಿದ್ದರೂ, ಅವರು ಅದನ್ನು ಪಡೆದುಕೊಂಡಂತೆ ನಟಿಸುತ್ತಾರೆ. ಸಂಗಾತಿ ಈ ಬಗ್ಗೆ ಪ್ರಶ್ನಿಸಿದ್ರೆ ಯಾವಾಗಲೂ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಾರೆ.
ಯಾವುದೇ ಮಹಿಳೆ ಅಥವಾ ಯುವತಿ ತನ್ನ ಹಳೆಯ ಸಂಬಂಧಗಳ ಬಗ್ಗೆ ಬಹಿರಂಗಪಡಿಸುವುದಿಲ್ಲ. ಗತಕಾಲದ ಸವಿನೆನಪುಗಳನ್ನು ನೆನೆದು ಸಂತಸಪಡುತ್ತಾಳೆ. ಯಾವುದೇ ಕಾಯಿಲೆಯನ್ನು ಹೊಂದಿದ್ದರೆ ಅದನ್ನು ಕೂಡ ಮಹಿಳೆಯರು ಬಹಿರಂಗಪಡಿಸುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸ ಮಾಡುತ್ತಲೇ ಇರುತ್ತಾಳೆ. ಮಹಿಳೆಯರು ಸುಂದರವಾಗಿ ಕಾಣಲು ಏನು ಮಾಡುತ್ತಾರೆ ಎಂಬುದನ್ನು ಯಾರಿಗೂ ಹೇಳುವುದಿಲ್ಲ. ಆಕೆ ತನ್ನ ಗೆಳೆಯನೊಂದಿಗೂ ಮೇಕಪ್ ರಹಸ್ಯಗಳನ್ನು ಹಂಚಿಕೊಳ್ಳುವುದಿಲ್ಲ. ಮಹಿಳೆಯರು ತಮ್ಮ ಸಂಗಾತಿಯ ಬಳಿ ಬ್ಯಾಂಕ್ ಖಾತೆಯಲ್ಲಿರುವ ಹಣ ಅಥವಾ ಉಳಿತಾಯದ ಮೊತ್ತವನ್ನು ಸಹ ಬಹಿರಂಗಪಡಿಸುವುದಿಲ್ಲ.