alex Certify ಮಹಿಳೆಯರು ಮೆಹಂದಿ ಯಾಕೆ ಹಾಕಿಕೊಳ್ತಾರೆ….? ಅದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಮೆಹಂದಿ ಯಾಕೆ ಹಾಕಿಕೊಳ್ತಾರೆ….? ಅದರ ಹಿಂದಿದೆ ಈ ಕಾರಣ

ಗಿಡ ಮರಗಳು ಬೆಳೆದು ಬೆಟ್ಟ ಗುಡ್ಡಗಳು ಹಸಿರಾಗುವುದೇ ಮಳೆಗಾಲದಲ್ಲಿ. ಹಬ್ಬಗಳೂ ಸಹ ಇದೇ ಮಾಸದಲ್ಲಿ ಬರುವ ಕಾರಣ ಎಲ್ಲರೂ ಶ್ರಾವಣಕ್ಕಾಗಿ ಕಾಯ್ತಾ ಇರ್ತಾರೆ. ಎಲ್ಲೆಡೆ ಹಸಿರು ತುಂಬಿರುವ ಶ್ರಾವಣ ಮಾಸದಲ್ಲಿ ವಿವಾಹಿತ ಮಹಿಳೆಯರು ಶೃಂಗಾರ ಮಾಡಿಕೊಳ್ಳುತ್ತಾರೆ. ಮದುವೆ ಆಗದ  ಹುಡುಗಿಯರು ಕೈಗೆ ಮೆಹಂದಿ ಮತ್ತು ಹಸಿರು, ಕೆಂಪು ಬಳೆಗಳನ್ನು ಧರಿಸುತ್ತಾರೆ.

ಭಾರತದಲ್ಲಿ ಗೋರಂಟಿ ಹಾಕುವ ಪದ್ಧತಿ  ಶತಮಾನಗಳಿಂದ ನಡೆದುಕೊಂಡು ಬಂದಿದೆ. ಚಂದದ ಮೆಹಂದಿ ಡಿಸೈನ್ ಗಳು ಎಲ್ಲಾ ವಯಸ್ಸಿನ ಮಹಿಳೆಯರನ್ನು ಆಕರ್ಷಿಸುತ್ತಿವೆ. ಅದ್ರಲ್ಲೂ  ಈ ತಿಂಗಳಲ್ಲಿ ಮೆಹಂದಿ ಪ್ರಾಮುಖ್ಯತೆ ಹೆಚ್ಚು.  ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮೆಹಂದಿ ಹಾಕುವ ಪದ್ಧತಿ ಇದೆ. ಮೆಹಂದಿಗೆ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ.

ಮಳೆಗಾಲದಲ್ಲಿ ಅನೇಕ ರೀತಿಯ ರೋಗಗಳು ಹರಡೋದು ಹೆಚ್ಚು. ಆಯುರ್ವೇದದ ಪ್ರಕಾರ ಹಸಿರು ಬಣ್ಣವನ್ನು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗಿದೆ. ಅಷ್ಟೇ ಅಲ್ದೇ  ಮೆಹಂದಿಯ ಸುಗಂಧ ಮತ್ತು ಔಷಧೀಯ ಗುಣ ಒತ್ತಡವನ್ನು ಕಡಿಮೆ ಮಾಡುತ್ತೆ. ಮೆಹಂದಿ ತಂಪಾಗಿರುವ ಗುಣ ಹೊಂದಿರೋದ್ರಿಂದ  ದೇಹದಲ್ಲಿ ಹೆಚ್ಚಿದ ಶಾಖ ಕಡಿಮೆ ಮಾಡಲು ಇದನ್ನು ಕೈ ಮತ್ತು ಕಾಲುಗಳಿಗೆ ಹಾಕುವ ಮೂಲಕ ದೇಹದ ಉಷ್ಣತೆ  ಕಡಿಮೆ ಮಾಡಿಕೊಳ್ಳಬಹುದು.

ಮೆಹಂದಿಯಲ್ಲಿ ಅನೇಕ ಔಷಧೀಯ ಗುಣಗಳಿರೋದ್ರಿಂದ ಉದ್ವೇಗ, ತಲೆನೋವು ಮತ್ತು ಜ್ವರದಿಂದ ಪರಿಹಾರ ನೀಡುತ್ತದೆ. ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಒಣಚರ್ಮಕ್ಕೆ ಕೂಡ ಬಹಳ ಒಳ್ಳೆಯದು.

ಶ್ರಾವಣ ತಿಂಗಳಲ್ಲಿ  ಅನೇಕ  ಹಬ್ಬಗಳಿದ್ದು, ಮಹಿಳೆಯರು  ವೃತ ಮತ್ತು ವಿವಿಧ ರೀತಿಯ ಪೂಜೆಗಳನ್ನು ನಡೆಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಮಹಿಳೆಯರು ಹಬ್ಬದ ದಿನಗಳಲ್ಲಿ ಸೌಭಾಗ್ಯ ಪ್ರಾಪ್ತಿಗಾಗಿ ಶೃಂಗಾರ ಅಗತ್ಯವೆಂದು ಪರಿಗಣಿಸಲಾಗಿದೆ. ವಿವಿಧ ಡಿಸೈನ್‌ ನ ಮೆಹಂದಿಗಳು ಮಹಿಳೆಯರ ಶೃಂಗಾರವನ್ನು ಹೆಚ್ಚಿಸುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...