ಮದುವೆಯಾಗುವ ವರನ ವಯಸ್ಸು ವಧುವಿಗಿಂತ ಹೆಚ್ಚಾಗಿರುತ್ತದೆ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಿಯಮ. ಆದರೆ ಕಾಲ ಬದಲಾದಂತೆ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರೊಂದಿಗೆ ಸಂಬಂಧ ಬೆಳೆಸಿ ಅವರನ್ನೇ ಮದುವೆಯಾದ ಅನೇಕ ಘಟನೆಗಳು ನಡೆದಿವೆ. ಹೀಗೆ ಮಾಡುವುದರಿಂದ ಸಮಾಜದ ಹಳೆಯ ನಿಯಮವೊಂದು ಮುರಿಯುತ್ತದೆ. ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರ ಕಡೆಗೆ ಏಕೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ಸಹಜ.
ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರತ್ತ ಆಕರ್ಷಿತರಾಗಲು ಕಾರಣಗಳೇನು ಎಂಬುದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. 30 ರಿಂದ 60 ವರ್ಷದೊಳಗಿನ 55 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಇದರ ಪ್ರಕಾರ ಈ ಮಹಿಳೆಯರು ಸುಮಾರು 5 ವರ್ಷಗಳ ಕಾಲ ತಮಗಿಂತ ಕಿರಿಯ ಪುರುಷರೊಂದಿಗೆ ಸಂಬಂಧ ಹೊಂದಿದ್ದರು. ಹೆಚ್ಚಿನ ಮಹಿಳೆಯರು ತಮಗಿಂತ ಕಿರಿಯ ಪುರುಷರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ.
ಏಕೆಂದರೆ ಸಮಾಜದ ಹಳೆಯ ನಿಯಮವನ್ನು ಮುರಿಯಬೇಕು ಎಂಬುದು ಅವರ ಉದ್ದೇಶ. ಇದಲ್ಲದೆ ಕಿರಿಯ ಪುರುಷರೊಂದಿಗೆ ಲೈಂಗಿಕ ಜೀವನವು ಹೆಚ್ಚು ತೃಪ್ತಿಕರವಾಗಿರುತ್ತದೆ ಎಂದು ಅವರು ನಂಬುತ್ತಾರೆ. ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರೊಂದಿಗೆ ಡೇಟಿಂಗ್ ಮಾಡಿದಾಗ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವ ವಯಸ್ಸಿನಲ್ಲಿ ಬೇಕಾದರೂ ಯುವಕರಿಗೆ ಮೋಡಿ ಮಾಡಬಲ್ಲೆ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಚಿಕ್ಕ ವಯಸ್ಸಿನ ಯುವಕರೊಂದಿಗಿನ ಸಂಬಂಧ ಅವರ ಉತ್ಸಾಹವನ್ನು ಹೆಚ್ಚಿಸುತ್ತದೆ.