ಕಾಲದ ಹಿಂದೆ ಓಡುತ್ತಿರುವ ಜನರಿಗೆ ಒತ್ತಡ ಸಾಮಾನ್ಯ. ಕೆಲವೊಮ್ಮೆ ವಿನಾಃ ಕಾರಣಕ್ಕೆ ಒತ್ತಡ ಕಾಣಿಸಿಕೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒತ್ತಡಕ್ಕೆ ಚಂದ್ರ ಕಾರಣನಾಗುತ್ತಾನೆ. ಮಹಿಳೆಯರಲ್ಲಿ ಒತ್ತಡ ಹೆಚ್ಚಾಗಲು ಮಂಗಳ ಹಾಗೂ ಗುರುವಿನ ಪ್ರಭಾವವೂ ಇರುತ್ತದೆ.
ಗುರು, ಚಂದ್ರ, ಮಂಗಳ ಈ ಮೂರರಲ್ಲಿ ಒಂದು ಗ್ರಹದಲ್ಲಿ ವ್ಯತ್ಯಾಸವಾದ್ರೂ ಮಹಿಳೆಯರಿಗೆ ಒತ್ತಡ ಕಾಡುತ್ತದೆ. ಆರೋಗ್ಯ ಸಂಬಂಧಿ ಒತ್ತಡ ಕಾಡುತ್ತಿದ್ದರೆ ಚಂದ್ರ ಹಾಗೂ ಬುಧ ಗ್ರಹ ದುರ್ಬಲವಾಗಿದೆ ಎಂದರ್ಥ. ಚಂದ್ರನ ಜೊತೆ ರಾಹು ಕೆಟ್ಟ ಸ್ಥಾನದಲ್ಲಿದ್ದರೂ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ.
ಆರೋಗ್ಯ ಸಂಬಂಧಿ ಒತ್ತಡ ಕಾಡಿದ್ರೆ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ನಿಮ್ಮ ವಯಸ್ಸಿನಷ್ಟು ಮಿಠಾಯಿಯನ್ನು ದೇವರಿಗೆ ಅರ್ಪಿಸಿ.
ಸಾಧ್ಯವಾದ್ರೆ ಬೆಳ್ಳಿ ವಸ್ತುವನ್ನು ಶಿವಲಿಂಗಕ್ಕೆ ಅರ್ಪಿಸಿ.
ಬೆಳ್ಳಿ ವಸ್ತುವೊಂದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಅದು ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ.
ಶುಕ್ರನ ಜೊತೆ ಚಂದ್ರ ದುರ್ಬಲನಾಗಿದ್ದರೆ ಮದುವೆ ಸಂಬಂಧಿ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ. ದಾಂಪತ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಬುಧವಾರ ದೇವಿ ದೇವಸ್ಥಾನಕ್ಕೆ ಹೋಗಿ ಅಲಂಕಾರಿಕ ವಸ್ತುಗಳನ್ನು ನೀಡಿ.
ಸುಗಂಧವನ್ನು ನಿಯಮಿತ ರೂಪದಲ್ಲಿ ಬಳಸಿ.
ಮಕ್ಕಳ ಸಂಬಂಧಿ ಒತ್ತಡ ಕಾಡುತ್ತಿದ್ದರೆ ಇದಕ್ಕೆ ಚಂದ್ರ, ಬುಧನ ಜೊತೆ ಗುರು ದುರ್ಬಲನಾಗಿದ್ದಾನೆ ಎಂದರ್ಥ. ಸಂತಾನ ಪ್ರಾಪ್ತಿಗಾಗಿ ಮಹಿಳೆಯರು ಗುರುವಾರ ದೇವಿಗೆ ಅರಿಶಿನ ಕೊಂಬನ್ನು ಅರ್ಪಿಸಿ.
ಹಳದಿ ಬಟ್ಟೆಯಲ್ಲಿ ಅರಿಶಿನ ಕೊಂಬನ್ನು ಕಟ್ಟಿ ಇಟ್ಟುಕೊಂಡರೂ ಒತ್ತಡ ಕಡಿಮೆಯಾಗುತ್ತದೆ.
ಗಂಡನ ಮನೆಯಿಂದ ಒತ್ತಡ ಅನುಭವಿಸುತ್ತಿದ್ದರೆ ಮಹಿಳೆಯರು ಶುಕ್ರವಾರ ದೇವಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಅರ್ಪಿಸಿ. ನಿಯಮಿತ ರೂಪದಲ್ಲಿ ಕುಂಕುಮವನ್ನಿಟ್ಟುಕೊಳ್ಳಿ.