alex Certify ಮಹಿಳೆಯರಿಗೆ ಮೋದಿಯವರಿಂದ ಭರ್ಜರಿ ಗುಡ್‌ ನ್ಯೂಸ್: ʼವರ್ಕ್‌ ಫ್ರಮ್‌ ಹೋಮ್‌ʼ ಗೆ ಅವಕಾಶ ನೀಡಲು ಪ್ರಧಾನಿ ಒಲವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಮೋದಿಯವರಿಂದ ಭರ್ಜರಿ ಗುಡ್‌ ನ್ಯೂಸ್: ʼವರ್ಕ್‌ ಫ್ರಮ್‌ ಹೋಮ್‌ʼ ಗೆ ಅವಕಾಶ ನೀಡಲು ಪ್ರಧಾನಿ ಒಲವು

ಮಹಿಳೆಯರಿಗೆ ವರ್ಕ್‌ ಫ್ರಮ್‌ ಹೋಮ್‌ಗೆ ಅವಕಾಶ ಮಾಡಿಕೊಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಲವು ತೋರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕೆಲಸ ಮಾಡಲು ಉತ್ತೇಜಿಸುವ ನಿಟ್ಟಿನಲ್ಲಿ ಅವರಿಗೆ ಹೊಂದಿಕೆಯಾಗುವ ಕೆಲಸದ ಸ್ಥಳಗಳನ್ನು ಬಳಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುವ ಕನಸು ಮತ್ತು ಆಕಾಂಕ್ಷೆಗಳನ್ನು ನನಸಾಗಿಸುವಲ್ಲಿ ಕಾರ್ಮಿಕ ಬಲವು ಪ್ರಮುಖ ಪಾತ್ರವನ್ನು ಹೊಂದಿದೆ ಎಂದವರು ಅಭಿಪ್ರಾಯಪಟ್ಟರು. ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಮರಳಿ ಪಡೆದಿದೆ ಎಂದು ಹೇಳಿದರು.

ಭವಿಷ್ಯದ ಅಗತ್ಯವೆಂದರೆ ಹೊಂದಿಕೆಯಾಗುವಂತಹ ಕೆಲಸದ ಸಮಯ. ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಗಾಗಿ ನಾವು ಅವರಿಗೆ ಹೊಂದಿಕೆಯಾಗುವಂತಹ ಕೆಲಸದ ಸ್ಥಳಗಳ ವ್ಯವಸ್ಥೆ ಮಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ. 2021 ರಲ್ಲಿ ಭಾರತದಲ್ಲಿ ಮಹಿಳೆಯರ ಕೆಲಸದ ಭಾಗವಹಿಸುವಿಕೆಯ ಪ್ರಮಾಣವು ಸುಮಾರು ಶೇ.25 ರಷ್ಟಿತ್ತು. ಇದು ಉದಯೋನ್ಮುಖ ಆರ್ಥಿಕತೆಗಳಿಗಿಂತ ಕೊಂಚ ಕಡಿಮೆಯಾಗಿದೆ.

ಮಹಿಳಾ ಶಕ್ತಿಯನ್ನು ಬಳಸಿಕೊಂಡರೆ ಭಾರತವು ವೇಗವಾಗಿ ಗುರಿ ಸಾಧಿಸಬಹುದು ಅಂತಾ ಪ್ರಧಾನಿ ಹೇಳಿದ್ದಾರೆ. 21 ನೇ ಶತಮಾನದಲ್ಲಿ ದೇಶದ ಯಶಸ್ಸು ಮುಂದಿನ ವರ್ಷಗಳಲ್ಲಿ ಜನಸಂಖ್ಯಾ ಲಾಭಾಂಶವನ್ನು ಎಷ್ಟು ಚೆನ್ನಾಗಿ ಬಳಸಿಕೊಂಡಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಗುಣಮಟ್ಟದ ಮತ್ತು ನುರಿತ ಉದ್ಯೋಗಿಗಳನ್ನು ಸೃಷ್ಟಿಸುವ ಮೂಲಕ ದೇಶವು ಜಾಗತಿಕ ಅವಕಾಶಗಳ ಲಾಭವನ್ನು ಪಡೆಯಬಹುದು. ಭಾರತವು ಅನೇಕ ದೇಶಗಳೊಂದಿಗೆ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಪಾಲುದಾರಿಕೆಗಳ ಲಾಭವನ್ನು ರಾಜ್ಯಗಳು ಪಡೆದುಕೊಳ್ಳಬೇಕೆಂದು ಮೋದಿ ಒತ್ತಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...