alex Certify ಮಹಿಳೆಯರಿಗೆ ಆರೋಗ್ಯದ ನಿಧಿ ಈ ಮೂರು ವಿಧದ ಜ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಆರೋಗ್ಯದ ನಿಧಿ ಈ ಮೂರು ವಿಧದ ಜ್ಯೂಸ್

ಮಹಿಳೆಯರದ್ದು ಬಹಳ ಶ್ರಮದ ಬದುಕು. ಮನೆ, ಮಕ್ಕಳು ಹಾಗೂ ಕಚೇರಿಯ ಜವಾಬ್ಧಾರಿಯನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ಸುಲಭದ ಮಾತಲ್ಲ. ಬಿಡುವಿಲ್ಲದ ಜೀವನಶೈಲಿಯಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ವಿಶೇಷವಾಗಿ 30 ವರ್ಷಗಳ ನಂತರ ದೇಹದ ಜೀವಕೋಶಗಳ ರಚನೆಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಇದು ಸ್ನಾಯುಗಳು, ಯಕೃತ್ತು, ಮೂತ್ರಪಿಂಡಗಳು ಸೇರಿದಂತೆ ಅನೇಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮೂಳೆಗಳು ದುರ್ಬಲಗೊಂಡರೆ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಮಹಿಳೆಯರು ವಿಶೇಷ ಕಾಳಜಿ ವಹಿಸಬೇಕು. ಕೆಲವು ನಿರ್ದಿಷ್ಟ ಆಹಾರಗಳನ್ನು ತಪ್ಪದೇ ಸೇವಿಸಬೇಕು.

ಮಹಿಳೆಯರಿಗಾಗಿ 3 ವಿಧದ ಜ್ಯೂಸ್…

ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಚರ್ಮ ಮತ್ತು ಕೂದಲಿನ ಆರೈಕೆಯನ್ನು ಮಾಡಲೇಬೇಕು. ಇದಕ್ಕಾಗಿ, ದುಬಾರಿ ಮತ್ತು ರಾಸಾಯನಿಕವನ್ನೊಳಗೊಂಡ ಉತ್ಪನ್ನಗಳನ್ನು ಬಳಸಬೇಡಿ. ಉತ್ತಮ ಪೋಷಕಾಂಶಗಳ ಸೇವನೆ ಮೂಲಕ ಕೂದಲು ಮತ್ತು ಚರ್ಮಕ್ಕೆ ಹೊಳಪನ್ನು ತರಬಹುದು. ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಮಹಿಳೆಯರು ಏನು ತಿನ್ನಬೇಕು ಎಂಬುದನ್ನು ನೋಡೋಣ.

ಮಿಶ್ರ ಹಣ್ಣಿನ ರಸ

ಹಣ್ಣುಗಳಲ್ಲಿ ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ದೇಹಕ್ಕೆ ಮತ್ತು ಮೆದುಳಿಗೆ ಪ್ರಯೋಜನವನ್ನು ನೀಡುತ್ತವೆ. ಹೃದಯಾಘಾತದಂತಹ ಅಪಾಯಕಾರಿ ಕಾಯಿಲೆಗಳನ್ನು ತಡೆಯುತ್ತವೆ. ಕಣ್ಣುಗಳು, ಚರ್ಮ ಮತ್ತು ಕೂದಲಿಗೆ ಮಿಶ್ರ ಹಣ್ಣಿನ ರಸ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವನೆ ಮಾಡಿ.

ಎಳನೀರು

ಎಳನೀರಿನ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ನಾವು ಎಲ್ಲೋ ಅಪರೂಪಕ್ಕೊಮ್ಮೆ ಎಳನೀರು ಕುಡಿಯುತ್ತೇವೆ. ಆದರೆ ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಎಳನೀರು ಕುಡಿಯಬೇಕು. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

ಮಿಶ್ರ ತರಕಾರಿ ರಸ

ತಾಜಾ ತರಕಾರಿಗಳನ್ನು ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅವುಗಳಿಂದ ತರಹೇವಾರಿ ಭಕ್ಷ್ಯಗಳನ್ನು ತಯಾರಿಸುತ್ತೇವೆ. ಆದರೆ ಮಿಶ್ರ ತರಕಾರಿಗಳ ಜ್ಯೂಸ್‌ ಮಾಡಿಕೊಂಡು ಕುಡಿಯಿರಿ. ಇದರಿಂದ ನಿಮ್ಮ ದೇಹಕ್ಕೆ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ಸತು ಮತ್ತು ಕ್ಯಾರೊನೈಡ್‌ಗಳಂತಹ ಪೋಷಕಾಂಶಗಳು ಸಿಗುತ್ತವೆ. ಅಧಿಕ ರಕ್ತದೊತ್ತಡ, ರಕ್ತಹೀನತೆ, ಚರ್ಮದ ಸಮಸ್ಯೆ ದೂರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...