ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ, ಎಲ್ಲವನ್ನೂ ನೋಡಿಕೊಳ್ಳುವ ಮಹಿಳೆಯರು ತಮ್ಮನ್ನು ತಾವು ಮರೆಯುತ್ತಾರೆ. ಇದರಿಂದಾಗಿ ಮಹಿಳೆಯರಲ್ಲಿ ಒತ್ತಡದ ಮಟ್ಟವು ಮೂರು ಪಟ್ಟು ಹೆಚ್ಚಾಗಿದೆ. ಬೆನ್ನು ನೋವು, ತಲೆನೋವು, ಗರ್ಭಕಂಠದಂತಹ ಸಮಸ್ಯೆಗಳು ಅವ್ರನ್ನು ಕಾಡ್ತಿದೆ. ಪಿಸಿಓಎಸ್, ಟೈಪ್ -2 ಡಯಾಬಿಟಿಸ್, ಸಂಧಿವಾತ, ಮೂಳೆ ರೋಗಗಳು ಮತ್ತು ಸ್ತನ ಕ್ಯಾನ್ಸರ್ ಕೂಡ ಹೆಚ್ಚಾಗಿದೆ. ಹೆರಿಗೆ ನಂತರದ ದೌರ್ಬಲ್ಯ ಅನೇಕ ಕಾಯಿಲೆಗಳಿಗೆ ಕಾರಣವಾಗ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮಹಿಳೆ ಆರೋಗ್ಯ ವಿಮೆ ಹೊಂದಿರುವುದು ಬಹಳ ಮುಖ್ಯ. ನೀವು ಗೃಹಿಣಿ, ವ್ಯಾಪಾರಸ್ಥ ಮಹಿಳೆ, ಮಗಳು ಅಥವಾ ಇನ್ನೊಬ್ಬರ ಸ್ನೇಹಿತೆ, ವಿವಾಹಿತೆ, ಅವಿವಾಹಿತೆ ಯಾರೇ ಆಗಿರಲಿ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಪುರುಷರ ಸಮಾನ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಅವರ ಆರೋಗ್ಯದ ಅಗತ್ಯಗಳೂ ಪುರುಷರಿಗೆ ಸಮಾನವಾಗಿರಬೇಕು. ಅವರಿಗೆ ಚಿಕಿತ್ಸೆಗೆ ಆರ್ಥಿಕ ಸಹಾಯದ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಕೆಲವರು ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಮುಂದಾಗ್ತಿದ್ದಾರೆ. ಆದ್ರೆ ಸರಿಯಾಗಿ ವಿಚಾರಿಸದೆ ನಕಲಿ ಏಜೆಂಟರ ಮಾತು ಕೇಳಿ ಮೋಸ ಹೋಗ್ತಿದ್ದಾರೆ. ಯಾವುದೇ ಆರೋಗ್ಯ ವಿಮೆ ತೆಗೆದುಕೊಳ್ಳುವ ಮೊದಲು ಅದ್ರ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು. ನಗದು ರಹಿತ ಸೇವೆ ಲಭ್ಯವಿದೆಯೇ ಎಂಬುದರಿಂದ ಹಿಡಿದು ಯಾವ ಯಾವ ಆಸ್ಪತ್ರೆಯಲ್ಲಿ ಈ ಸೌಲಭ್ಯವಿದೆ ಎಂಬುದನ್ನೂ ತಿಳಿದಿರಬೇಕು. ಉತ್ತಮ ಹಾಗೂ ಸುರಕ್ಷಿತ ಆರೋಗ್ಯ ವಿಮೆಯನ್ನು ಆಯ್ದುಕೊಳ್ಳಿ.