ಹಿಮೋಗ್ಲೋಬಿನ್ ಕೌಂಟ್ ಡೌನ್ ಹೆಚ್ಚಾಗಿ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆ. ವಿಶೇಷವಾಗಿ ಭಾರತದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆರೋಗ್ಯವಂತ ಗಂಡಸರಲ್ಲಿ 13.5 ರಿಂದ 17.5 ಹಾಗೂ ಮಹಿಳೆಯರಲ್ಲಿ 12 ರಿಂದ 15.5 ರಷ್ಟು ಹಿಮೋಗ್ಲೋಬಿನ್ ಅಂಶ ಇರಬೇಕೆಂದು ತಜ್ಞರ ಅಭಿಪ್ರಾಯ. ಇದನ್ನು ಹೆಚ್ಚಿಸುವ ಆಹಾರಗಳು ಇಲ್ಲಿವೆ.
ದಾಳಿಂಬೆ ಹಣ್ಣಿನಲ್ಲಿ ಅಗಾಧ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ, ಪ್ರೊಟೀನ್, ಕಾರ್ಬೋ ಹೈಡ್ರೇಟ್ ಮತ್ತು ಕರಗುವ ನಾರು ಇದೆ. ಇವು ರಕ್ತದಲ್ಲಿ ಇರುವ ಹಿಮೋಗ್ಲೋಬಿನ್ ಹೆಚ್ಚಿಸಲು ನೆರವಾಗುತ್ತದೆ. ಸುಗಮವಾದ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ಕಡಿಮೆ ಇರುವವರು ಬೀಟ್ರೂಟ್ ತಿನ್ನಲೇಬೇಕು. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಬೀಟ್ರೂಟ್ ನಲ್ಲಿ ಹೆಚ್ಚಾಗಿ ಐರನ್, ಫೈಬರ್, ಪೊಟ್ಯಾಷಿಯಂ ಇರುವುದರಿಂದ ರಕ್ತ ಹೀನತೆಯನ್ನು ಹೋಗಲಾಡಿಸಲು ಅತ್ಯುತ್ತಮ ಆಹಾರವಾಗಿದೆ.
ಹಿಮೋಗ್ಲೋಬಿನ್ ಕೊರತೆಗೆ ಎಲ್ಲ ತರಹದ ಸೊಪ್ಪುಗಳನ್ನು ಉಪಯೋಗಿಸಬಹುದು. ಮುಖ್ಯವಾಗಿ ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬಸಗಿ ಸೊಪ್ಪು, ನುಗ್ಗೆ ಸೊಪ್ಪು, ಬಸಳೆ ಸೊಪ್ಪು ಬಳಸಿ.