
ನ್ಯೂಯಾರ್ಕ್ ನಗರದ ಯೂಟ್ಯೂಬರ್ ಕ್ಯಾಮಿಲ್ಲೆ ಜಾನ್ಸನ್ ಅವರು ಟ್ವಿಟ್ಟರ್ ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಜನವರಿಯಲ್ಲಿ ವೈದ್ಯರ ಅಪಾಯಿಂಟ್‌ಮೆಂಟ್‌ಗೆ ಹೋದಾಗ ಆಕೆಯ ಸಹೋದರಿಗೆ ನೀಡಿದ ಆಸ್ಪತ್ರೆಯ ಬಿಲ್ ಅನ್ನು ತೋರಿಸುತ್ತದೆ. ಸಾಮಾನ್ಯವಾಗಿ ವೈದ್ಯಕೀಯ ಪರೀಕ್ಷೆಗಳಿಗೆ ನಿಗದಿತ ಸಾಮಾನ್ಯ ವೆಚ್ಚಗಳಿದ್ದರೂ, ನೆಟ್ಟಿಗರ ಕಣ್ಣಿಗೆ ಬಿದ್ದದ್ದು ಮಾತ್ರ ಅಳುವ ಶುಲ್ಕ..! ಹೌದು, ನಾವು ತಮಾಷೆ ಮಾಡುತ್ತಿಲ್ಲ. ಕ್ಲಿನಿಕ್ ನಲ್ಲಿ ಮಹಿಳೆ ಅತ್ತಿದ್ದಕ್ಕಾಗಿ $ 40 (ಅಂದಾಜು ರೂ. 3000) ಶುಲ್ಕವನ್ನು ವಿಧಿಸಲಾಗಿದೆ.
ತನ್ನ ಚಿಕ್ಕ ಸಹೋದರಿ ಇತ್ತೀಚೆಗೆ ಅನಾರೋಗ್ಯದೊಂದಿಗೆ ಹೋರಾಡುತ್ತಿದ್ದಾರೆ. ಹೀಗಾಗಿ ವೈದ್ಯರನ್ನು ಭೇಟಿ ಮಾಡಬೇಕಾಯಿತು. ಈ ವೇಳೆ ಕ್ಲಿನಿಕ್ ನಲ್ಲಿ ಅತ್ತಿದ್ದಕ್ಕೆ ಆಕೆಗೆ 3,000 ರೂ. ಶುಲ್ಕ ವಿಧಿಸಲಾಗಿದೆ ಎಂದು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ 50,000 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.
ಅಮೆರಿಕಾದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಮೊತ್ತವು ಸಾಮಾನ್ಯ ಜನರಿಗೆ ಗಗನಕುಸುಮವಾದಂತಾಗಿದೆ. ಕೇವಲ ಎಕ್ಸ್-ರೇ ಮಾಡಿಸುವುದಕ್ಕಾಗಿ ಅತಿಯಾದ ಬಿಲ್‌ಗಳಿಂದ ಹಿಡಿದು ಸಣ್ಣ ಶಸ್ತ್ರಚಿಕಿತ್ಸೆಗೆ, ಯೋಚಿಸಲಾಗದಷ್ಟು ವೈದ್ಯಕೀಯ ಮೊತ್ತವನ್ನು ಪಾವತಿಸಬೇಕಾಗುತ್ತದೆ.