alex Certify ಮಹಿಳಾ ʼಕಾಂಡೋಮ್ʼ ಎಂದರೇನು…? ಸಂಭೋಗದ ವೇಳೆ ಬಳಸುವ ಗರ್ಭ ನಿರೋಧಕಗಳ ಬಗ್ಗೆ ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ʼಕಾಂಡೋಮ್ʼ ಎಂದರೇನು…? ಸಂಭೋಗದ ವೇಳೆ ಬಳಸುವ ಗರ್ಭ ನಿರೋಧಕಗಳ ಬಗ್ಗೆ ಇಲ್ಲಿದೆ ವಿವರ

ಮಹಿಳಾ ಕಾಂಡೋಮ್ ಎಂದರೇನು…? ಅಂತಹ ಗರ್ಭನಿರೋಧಕಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

ಮಹಿಳಾ ಗರ್ಭನಿರೋಧಕಗಳು:

ಇದು ಗರ್ಭಧಾರಣೆಯನ್ನು ತಡೆಗಟ್ಟಲು ಬಳಸುವ ಸಾಧನವಾಗಿದೆ. ಗರ್ಭಧಾರಣೆ ತಡೆಯುವ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ ಮೇಲಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಹಾಗಾಗಿ, ಮಹಿಳೆಯರು ಗರ್ಭ ನಿರೋಧಕಗಳ ಬಗ್ಗೆ ಹೆಚ್ಚು ತಿಳಿದಿದ್ದರೆ, ಪುರುಷರಿಗೆ ಅವುಗಳ ಬಗ್ಗೆ ಹೆಚ್ಚಿನ ಜ್ಞಾನವೇ ಇರುವುದಿಲ್ಲ.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸುದೇಶ್ನಾ ರೇ ಅವರ ಪ್ರಕಾರ, ಗರ್ಭನಿರೋಧಕವು ಮಹಿಳೆಯರ ಜವಾಬ್ದಾರಿ ಎಂದು ಪುರುಷರು ಸಾಮಾನ್ಯವಾಗಿ ಭಾವಿಸುತ್ತಾರೆ.

ಗರ್ಭನಿರೋಧಕಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗರ್ಭಧಾರಣೆ ಮತ್ತು ಸೋಂಕು ತಡೆಗಟ್ಟಲು ಬಳಸುವ ವಿಭಿನ್ನ ಸ್ತ್ರೀ ಗರ್ಭನಿರೋಧಕಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಕೆಳಗೆ ತಿಳಿಸಲಾಗಿರುವ ಗರ್ಭನಿರೋಧಕಗಳು ಗರ್ಭನಿರೋಧಕದ ಶಾಶ್ವತ ವಿಧಾನಗಳಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. ಸಾಧನ ಬಳಸದ ತಕ್ಷಣ ಫಲವತ್ತತೆ ಮರಳಿ ಬರುತ್ತದೆ ಎನ್ನುವುದನ್ನು ಗಮನಿಸಿ.

ಸ್ತ್ರೀ ಡಯಾಫ್ರಾಮ್ ಅಥವಾ ಗರ್ಭಕಂಠದ ಕಪ್

ಲೈಂಗಿಕ ಸಂಭೋಗದ ಮೊದಲು ಯೋನಿಯೊಳಗೆ ಸೇರಿಸಬೇಕಾದ ಸಾಧನಗಳು ಇವು. ಅವು ಕಪ್ ಆಕಾರದ, ಸ್ವಲ್ಪ ಆಳವಿಲ್ಲದ ಅಥವಾ ಆಳವಾದ ರೀತಿಯಲ್ಲಿರುತ್ತವೆ. ಡಯಾಫ್ರಾಮ್ ಗಳು ಅಥವಾ ಗರ್ಭಕಂಠದ ಕಪ್ ಗಳು ವೀರ್ಯಾಣುಗಳನ್ನು ನಿಷ್ಕ್ರಿಯಗೊಳಿಸುವ ವೀರ್ಯಾಣು ಜೆಲ್ ನಿಂದ ತುಂಬಿರಬೇಕು.

ಡಯಾಫ್ರಾಮ್ ಗಳು ಅಥವಾ ಗರ್ಭಕಂಠದ ಕಪ್ ಗಳು ಹಾರ್ಮೋನುಗಳಲ್ಲದವು. ವೀರ್ಯವು ಗರ್ಭಾಶಯಕ್ಕೆ ಬರದಂತೆ ತಡೆಯಲು ಮಾತ್ರ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇವುಗಳ ವಿಶಿಷ್ಟ ವೈಫಲ್ಯದ ಪ್ರಮಾಣ ಸುಮಾರು ಶೇಕಡ 17. ಡಯಾಫ್ರಾಮ್ ಗಳು ಅಥವಾ ಗರ್ಭಕಂಠದ ಕಪ್ ಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ.

ಸ್ತ್ರೀ ಕಾಂಡೋಮ್

ಈ ವಿಧಾನವು ಮಾನ್ಯತೆ ಪಡೆಯುತ್ತಿದೆ. ಮಾತ್ರವಲ್ಲ, ಜನಪ್ರಿಯವಾಗುತ್ತಿದೆ. ಸ್ತ್ರೀ ಕಾಂಡೋಮ್ ಗರ್ಭನಿರೋಧಕದ ಮತ್ತೊಂದು ವಿಧಾನವಾಗಿದ್ದು, ಲೈಂಗಿಕ ಸಂಭೋಗಕ್ಕೆ ಸುಮಾರು ಎಂಟು ಗಂಟೆಗಳ ಮೊದಲು ಯೋನಿಯೊಳಗೆ ಸೇರಿಸಬೇಕಾಗುತ್ತದೆ. ಆದಾಗ್ಯೂ ಸಂಭೋಗದ ನಂತರ ತಕ್ಷಣವೇ ಅದನ್ನು ತ್ಯಜಿಸಬೇಕಿದೆ.

ಈ ಕಾಂಡೋಮ್ ವಿಶಿಷ್ಟ ವೈಫಲ್ಯದ ಪ್ರಮಾಣವು ಸುಮಾರು ಶೇಕಡ 14 ಪ್ರತಿಶತದಷ್ಟಿದೆ, ಸ್ತ್ರೀ ಕಾಂಡೋಮ್ ಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಗರ್ಭಧಾರಣೆ ಮತ್ತು ಸೋಂಕುಗಳ ವಿರುದ್ಧ ರಕ್ಷಣೆಯ ಉಸ್ತುವಾರಿ ವಹಿಸಿಕೊಂಡು ಮಹಿಳೆಯರಿಗೆ ಸಹಾಯ ಮಾಡುತ್ತವೆ. ಎಲ್ಲಾ ಸ್ತ್ರೀ ಗರ್ಭನಿರೋಧಕಗಳಲ್ಲಿ, ಸ್ತ್ರೀ ಕಾಂಡೋಮ್ ಗಳು ಮಾತ್ರ ಲೈಂಗಿಕವಾಗಿ ಹರಡುವ ಸೋಂಕುಗಳು(ಎಸ್‌ಟಿಐ) ಅಥವಾ ರೋಗಗಳನ್ನು(ಎಸ್‌ಟಿಡಿ) ತಡೆಯಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಸ್ತ್ರೀ ಗರ್ಭನಿರೋಧಕ ಸ್ಪಾಂಜ್

ಇದು ಮೃದುವಾದ ಡಿಸ್ಕ್ ಆಕಾರದ ಸ್ಪಾಂಜ್ ಆಗಿದ್ದು, ವೀರ್ಯಾಣು ಜೆಲ್ ನಿಂದ ತುಂಬಿರುತ್ತದೆ, ಇದು ವೀರ್ಯಗಳನ್ನು ಕೊಲ್ಲುತ್ತದೆ. ಲೈಂಗಿಕ ಸಂಭೋಗದ ಮೊದಲು ಇದನ್ನು ಯೋನಿಯೊಳಗೆ ಆಳವಾಗಿ ಸೇರಿಸಬೇಕು. ಕೊನೆಯ ಸಂಭೋಗದ ನಂತರ ಸ್ಪಾಂಜ್ ಕನಿಷ್ಠ ಆರು ಗಂಟೆಗಳ ಕಾಲ ಒಳಗೆ ಇರಬೇಕು.

ಗರ್ಭನಿರೋಧಕ ಸ್ಪಾಂಜ್ ಯೋನಿಯಲ್ಲಿ ಸುಮಾರು 24 ಗಂಟೆಗಳ ಕಾಲ ಉಳಿಯುತ್ತದೆ ಮತ್ತು ವಿಶಿಷ್ಟ ವೈಫಲ್ಯದ ಪ್ರಮಾಣವು ಸುಮಾರು 14-27 ಪ್ರತಿಶತದಷ್ಟು ಇರುತ್ತದೆ. ‘ಮಕ್ಕಳನ್ನು ಹೊಂದಿರದ ಮಹಿಳೆಯರಿಗಿಂತ ಮಕ್ಕಳನ್ನು ಹೊಂದಿರುವ ಮಹಿಳೆಯರಲ್ಲಿ ಇದು ಹೆಚ್ಚು ಯಶಸ್ವಿಯಾಗಿದೆ ಎನ್ನುತ್ತಾರೆ ಡಾ. ಸುದೇಶ್ನಾ ರೇ.

ಗರ್ಭನಿರೋಧಕಗಳ ಹೆಚ್ಚಿನ ವಿಧಾನಗಳನ್ನು ಮತ್ತು ಹೆಚ್ಚಿನದನ್ನು ತಿಳಿಯಲು ಪೂರ್ಣ ವೀಡಿಯೊವನ್ನು ನೋಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...