ಮಹಾಲಕ್ಷ್ಮಿ ಕೃಪೆಯಿದ್ರೆ ಮಾತ್ರ ಮನುಷ್ಯ ಸುಖವಾಗಿ ಜೀವಿಸಲು ಸಾಧ್ಯ. ತಾಯಿ ಒಂದೇ ಮನೆಯಲ್ಲಿ ತುಂಬಾ ದಿನಗಳ ಕಾಲ ಇರೋದಿಲ್ಲ. ಅದ್ರಲ್ಲೂ ಆಕೆಗೆ ಇಷ್ಟವಾಗದ ಘಟನೆಗಳು ಮನೆಯಲ್ಲಿ ನಡೆಯುತ್ತಿದ್ದರೆ ತಾಯಿ ಆ ಮನೆ ಕಡೆ ಮುಖ ಹಾಕುವುದಿಲ್ಲ.
ತಾಯಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಲು ಜನರು ಏನೆಲ್ಲ ಕಸರತ್ತುಗಳನ್ನು ಮಾಡ್ತಾರೆ. ಕೆಲವೊಂದು ಸುಲಭ ಉಪಾಯಗಳಿಂದ ಲಕ್ಷ್ಮಿನಾರಾಯಣರನ್ನು ಒಲಿಸಿಕೊಳ್ಳಬಹುದು.
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಿ.
ಗೋಧಿ ಹಿಟ್ಟಿನಿಂದ ಮಾಡಿದ ದೀಪದಲ್ಲಿ ದೀಪ ಬೆಳಗಿ
ದೀಪಕ್ಕೆ ಆಕಳ ತುಪ್ಪ ಹಾಗೂ ದೇಸಿ ಕರ್ಪೂರವನ್ನು ಬಳಸಿ.
ಲಕ್ಷ್ಮಿನಾರಾಯಣನ ಮುಂದೆ ದೀಪ ಹಚ್ಚಿ, ಓಂ ಹ್ರೀಂ ಶ್ರೀ ಮಹಾಲಕ್ಷ್ಮಿಯೇ ನಮಃ ಮಂತ್ರವನ್ನು 108 ಬಾರಿ ಜಪಿಸಿ. ಮಂತ್ರ ಹೇಳುವಾಗ ಕೆಂಪು ಆಸನವನ್ನು ಬಳಸಿ.
ಮುಖ ಉತ್ತರ ದಿಕ್ಕಿನಲ್ಲಿರುವಂತೆ ಕುಳಿತುಕೊಳ್ಳಿ. ಅನ್ನ, ಧನ, ಸುಖಕ್ಕಾಗಿ ಪ್ರಾರ್ಥನೆ ಮಾಡಿ.