alex Certify ಮಹಾರಾಷ್ಟ್ರದ ನೂತನ ಸಿಎಂ ಆಗ್ತಿರೋ ಏಕನಾಥ್‌ ಶಿಂಧೆ ಯಾರು……? ಇಲ್ಲಿದೆ ಅವರ ರಾಜಕೀಯ ಬದುಕಿನ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದ ನೂತನ ಸಿಎಂ ಆಗ್ತಿರೋ ಏಕನಾಥ್‌ ಶಿಂಧೆ ಯಾರು……? ಇಲ್ಲಿದೆ ಅವರ ರಾಜಕೀಯ ಬದುಕಿನ ವಿವರ 

ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಶಿವಸೇನೆಯಲ್ಲಿ ಬಂಡಾಯವೆದ್ದಿದ್ದ ಈ ನಾಯಕರೊಂದಿಗೆ ಮೈತ್ರಿ ಮಾಡಿಕೊಂಡು, ಬಿಜೆಪಿಯ ದೇವೇಂದ್ರ ಫಡ್ನವಿಸ್‌ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಲಿದ್ದಾರೆ ಅಂತಾನೇ ಹೇಳಲಾಗುತ್ತಿತ್ತು. ಆದ್ರೆ ಈ ಊಹಾಪೋಹಗಳೆಲ್ಲ ಸುಳ್ಳಾಗಿದೆ. ಏಕನಾಥ್‌ ಶಿಂಧೆ ಅವರೇ ಹೊಸ ಮುಖ್ಯಮಂತ್ರಿ ಎಂಬ ಘೋಷಣೆ ಹೊರಬಿದ್ದಿದೆ.

ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿ ಮಾಡಿರೋ ಈ ಏಕನಾಥ್‌ ಶಿಂಧೆ ಯಾರು? ಸರ್ಕಾರವನ್ನೇ ಕೆಡವುವಷ್ಟು ಪವರ್‌ ಅವರ ಬಳಿ ಇದ್ಯಾ? ಅವರ ರಾಜಕೀಯ ಇತಿಹಾಸವೇನು ಎಂಬುದನ್ನೆಲ್ಲ ನೋಡೋಣ.

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದಲ್ಲಿ ನಗರ ವ್ಯವಹಾರಗಳ ಸಚಿವರಾಗಿದ್ದ ಏಕನಾಥ್ ಶಿಂಧೆ, ಶಿವಸೇನೆಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. 1964ರಲ್ಲಿ ಏಕನಾಥ್‌ ಶಿಂಧೆ ಜನಿಸಿದರು. ಇವರು ಮರಾಠ ಸಮುದಾಯದಿಂದ ಬಂದವರು.

ಏಕನಾಥ್‌ ಶಿಂಧೆ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವರಲ್ಲ. ಬಡತನದ ಕಾರಣಕ್ಕೆ ಶಿಕ್ಷಣವನ್ನು ಅರ್ಧದಲ್ಲೇ ತೊರೆದಿದ್ದರಂತೆ. ಏಕನಾಥ್ ಶಿಂಧೆ ರಾಜಕೀಯಕ್ಕೆ ಅಡಿಯಿಟ್ಟಿದ್ದು 1997ರಲ್ಲಿ. ಮೊದಲ ಬಾರಿಗೆ ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ನಂತರ ಹಿಂದಿರುಗಿ ನೋಡಲೇ ಇಲ್ಲ.

2001ರಲ್ಲಿ ಶಿಂಧೆ, ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ಗೆ ಆಯ್ಕೆಯಾದರು. 2002ರಲ್ಲಿ ಎರಡನೇ ಬಾರಿಗೆ ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ ಚುಕ್ಕಾಣಿ ಹಿಡಿದರು. 2004ರಲ್ಲಿ ಶಿಂಧೆ ಅವರಿಗೆ ಅದೃಷ್ಟ ಒಲಿದಿತ್ತು. ಥಾಣೆಯ ಕೊಪ್ರಿ-ಪಚ್ಪಖಾಡಿ ಕ್ಷೇತ್ರದಿಂದ ಶಿಂಧೆ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರು.

ಇಲ್ಲಿಂದ ಅವರ ರಾಜಕೀಯ ಬದುಕು ಇನ್ನಷ್ಟು ರಂಗು ಪಡೆದುಕೊಂಡಿತ್ತು. ಏಕನಾಥ್ ಶಿಂಧೆ ಜೀವನೋಪಾಯಕ್ಕಾಗಿ ಶಿಕ್ಷಣವನ್ನು ಮೊದಲೇ ತೊರೆದಿದ್ದರಂತೆ. ಆದರೆ 2014 ರಲ್ಲಿ ಸಚಿವರಾದ ನಂತರ ಶಿಂಧೆ ತಮ್ಮ ಅಧ್ಯಯನವನ್ನು ಪುನರಾರಂಭಿಸಿದರು. ಮಹಾರಾಷ್ಟ್ರದ ಯಶವಂತರಾವ್ ಚವಾಣ್‌ ಮುಕ್ತ ವಿಶ್ವವಿದ್ಯಾಲಯದಿಂದ ಶಿಕ್ಷಣದಲ್ಲಿ ಪದವಿ ಪಡೆದರು. ಇದೀಗ ಶಿವಸೇನೆಯ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಸಾರಿ ಅದರಲ್ಲೂ ಯಶಸ್ಸು ಕಂಡಿದ್ದಾರೆ. ಗುವಾಹಟಿ ಹಾಗೂ ಗುಜರಾತ್‌ನಲ್ಲಿ ಒಂದಷ್ಟು ಶಾಸಕರೊಂದಿಗೆ ರೆಸಾರ್ಟ್‌ ರಾಜಕೀಯ ನಡೆಸಿದ ಏಕನಾಥ್‌ ಶಿಂಧೆ ಹಠ ಬಿಡದೇ ಮಹಾರಾಷ್ಟ್ರದ ಸಿಎಂ ಗಾದಿಯನ್ನು ಏರುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...