ನಾಗ್ಪುರ : ಕೊರೊನಾ ವೈರಸ್ ಆರಂಭದಲ್ಲಿ ಮಹಾರಾಷ್ಟ್ರದ ಮೇಲೆ ಕರಿನೆರಳು ಬೀರಿತ್ತು. ಹೆಚ್ಚಾಗಿ ಮಹಾರಾಷ್ಟ್ರವನ್ನೇ ಅದು ಟಾರ್ಗೆಟ್ ಮಾಡಿತ್ತು. ಈಗ ಓಮಿಕ್ರಾನ್ ಕೂಡ ಮಹಾರಾಷ್ಟ್ರವನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ಭಾವನೆ ಮೂಡುವಂತಾಗಿದೆ.
ಏಕೆಂದರೆ, ಇಂದು ನಾಗ್ಪುರದಲ್ಲಿ ಕೂಡ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಅಲ್ಲಿನ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಲ್ಲಿಯವರೆಗಿನ ಪ್ರಕರಣಗಳನ್ನು ಗಮನಿಸಿದರೆ, ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ದಾಖಲಾದಂತಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಇಂದು ಆಂಧ್ರಪ್ರದೇಶ ಹಾಗೂ ಚಂಡೀಗಡದಲ್ಲಿ ಬೆಳಿಗ್ಗೆ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದವು. ಅದಾದ ನಂತರ ಕರ್ನಾಟಕದಲ್ಲಿ ಪತ್ತೆಯಾಗಿತ್ತು. ಈಗ ನಾಗ್ಪುರದಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಇದುವರೆಗೂ ಕಂಡು ಬಂದ ಓಮಿಕ್ರಾನ್ ರೋಗಿಗಳಲ್ಲಿ ಯಾವುದೇ ಭಯಾನಕ ತೊಂದರೆ ಕಂಡು ಬಂದಿಲ್ಲ. ವೈರಸ್ ನ ಲಕ್ಷಣ ಸೌಮ್ಯವಾಗಿದ್ದರೂ ಅದರ ಹರಡುವಿಕೆ ಆತಂಕ ಮೂಡಿಸುತ್ತಿದೆ. ಇಲ್ಲಿಯವರೆಗೂ ಓಮಿಕ್ರಾನ್ ನಿಂದ ಯಾವುದೇ ಸಾವು – ನೋವು ಸಂಭವಿಸಿಲ್ಲ. ಕೆಲವು ವ್ಯಕ್ತಿಗಳು ವಾರದಲ್ಲಿಯೇ ಗುಣಮುಖರಾಗುತ್ತಿದ್ದಾರೆ.