ಭಾರತದ ದಕ್ಷಿಣ ಮಧ್ಯ ಭಾಗದಲ್ಲಿರುವ ಮಹಾರಾಷ್ಟ್ರ ಭಾರತದ ಮೂರನೇ ಅತಿದೊಡ್ಡ ರಾಜ್ಯ. ಇದು ಮುಂಬೈ, ಪುಣೆ, ಕೊಲ್ಲಾಪುರ ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇಶದ ಆರ್ಥಿಕ ರಾಜಧಾನಿ ಮತ್ತು ಭಾರತದ ಆರನೇ ದೊಡ್ಡ ನಗರ ಪುಣೆ ಇರೋದು ಮಹಾರಾಷ್ಟ್ರದಲ್ಲೇ. ಇದಲ್ಲದೆ ಇಲ್ಲಿ ಒಂದಕ್ಕಿಂತ ಒಂದು ಪ್ರವಾಸಿ ಸ್ಥಳಗಳಿವೆ.
ಅಮರಾವತಿಯನ್ನು ಇಂದ್ರ ನಗರಿ ಎಂದು ಕರೆಯಲಾಗುತ್ತದೆ. ಅನೇಕ ಐತಿಹಾಸಿಕ ದೇವಾಲಯಗಳು ಮತ್ತು ಅಭಯಾರಣ್ಯಗಳು ಇಲ್ಲಿವೆ. ಅಂಬಾ, ಶ್ರೀಕೃಷ್ಣ ಮತ್ತು ವೆಂಕಟೇಶ್ವರ ದೇವಾಲಯಗಳು ಪ್ರಸಿದ್ಧಿ ಪಡೆದಿವೆ. ಬಿರ್ ಮತ್ತು ಸಕ್ಕರೆ ಸರೋವರಗಳು ಸಾಕಷ್ಟು ಜನಪ್ರಿಯವಾಗಿವೆ.
ಕುಂಭಮೇಳದ ಮೂಲಕ ಇಡೀ ದೇಶದ ಜನರನ್ನು ತನ್ನತ್ತ ಸೆಳೆಯುವ ನಾಸಿಕ್ ಇರೋದು ಮಹಾರಾಷ್ಟ್ರದ ವಾಯುವ್ಯದಲ್ಲಿ. ಈ ನಗರ ಪ್ರಮುಖವಾಗಿ ಹಿಂದೂ ಯಾತ್ರಿಕರ, ಭಕ್ತಾದಿಗಳ ಕೇಂದ್ರವಾಗಿದೆ. ನಾಸಿಕ್ ನಲ್ಲಿ ಕುಂಭಮೇಳ ಪ್ರಮುಖ ಆಕರ್ಷಣೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ತ್ರಯಂಬಕೇಶ್ವರ ದೇವಾಲಯವೂ ಇಲ್ಲೇ ಇರೋದು.
ಸಾಂಸ್ಕೃತಿಕ ರಾಜಧಾನಿಯಾಗಿರುವ ಕ್ವೀನ್ ಆಫ್ ಡೆಕ್ಕನ್ ಅಂತ ಕರೆಯಲ್ಪಡುವ ನಗರ ಪುಣೆ. ಇಲ್ಲಿರುವ ಅರಮನೆ ಎಲ್ಲರ ಗಮನ ಸೆಳೆಯುತ್ತದೆ.
ಅಂದು ಬಾಂಬೆ ಎಂದು ಕರೆಯುತ್ತಿದ್ದ ನಗರ ಇಂದಿನ ಮುಂಬೈ. ಮಹಾರಾಷ್ಟ್ರದ ರಾಜಧಾನಿಯೂ ಆಗಿರುವ ಈ ನಗರ ಭಾರತದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಒಂದು. ಮುಂಬೈನಲ್ಲಿ ದೇಶದ ಪ್ರಮುಖ ಹಣಕಾಸು ಮತ್ತು ಸಂವಹನ ಕೇಂದ್ರಗಳಿವೆ. ಒಮ್ಮೆ ಭೇಟಿ ನೀಡಲೇಬೇಕಾದಂತಹ ಗೇಟ್‌ವೇ ಆಫ್ ಇಂಡಿಯಾ, ಹಾಜಿ ಅಲಿ, ಜುಹು ಬೀಚ್, ಜೋಗೇಶ್ವರಿ ಗುಹೆ, ಹ್ಯಾಂಗಿಂಗ್ ಗಾರ್ಡನ್, ಸಿದ್ಧ್ವಿನಾಯಕ ದೇವಸ್ಥಾನ, ಮೆರೈನ್ ಡ್ರೈವ್ ಇವೆಲ್ಲ ಇರೋದು ಮುಂಬೈನಲ್ಲೇ.
ಸಮುದ್ರದಿಂದ ಸುತ್ತುವರೆದಿರುವ ಬಾಲ ಗಂಗಾಧರ ತಿಲಕರ ಜನ್ಮ ಸ್ಥಳವು ಆಗಿರೋ ರತ್ನಗಿರಿ ಅರೇಬಿಯನ್ ಸಮುದ್ರದ ತೀರದಲ್ಲಿದೆ. ಇದು ಕೊಂಕಣ ಪ್ರದೇಶದ ಒಂದು ಭಾಗವಾಗಿದ್ದು ಇಲ್ಲಿ ಬಹಳ ಉದ್ದವಾದ ಬೀಚ್ ಮತ್ತು ಅನೇಕ ಬಂದರುಗಳಿವೆ. ರತ್ನಗಿರಿಯಲ್ಲಿ ಮಠದ ಜೊತೆಗೆ ಆರು ದೇವಾಲಯಗಳು, 1386 ಮುದ್ರೆಗಳು, ಹಲವಾರು ಅವಶೇಷಗಳಿವೆ.
ಘಾಟ್ ಮತ್ತು ಕಣಿವೆಯನ್ನು ಹೊಂದಿರುವ ಖಂಡಾಲಾ ನಗರ ಮುಂಬಯಿಯಿಂದ ಆಗ್ನೇಯಕ್ಕೆ 100 ಕಿ.ಮೀ ಮತ್ತು ಪುಣೆಯಿಂದ 70 ಕಿ.ಮೀ ದೂರದಲ್ಲಿದೆ. ಲೋನವಾಲಾದಿಂದ 5 ಕಿಲೋಮೀಟರ್ ದೂರದಲ್ಲಿದೆ. ಅಮೃತಂಜನ್ ಪಾಯಿಂಟ್ ಖಂಡಲಾ ಘಾಟ್‌ನಲ್ಲಿ ಮುಖ್ಯ ಪ್ರವಾಸಿ ಆಕರ್ಷಣೆಯಾಗಿದೆ. ಹಸಿರು, ಸುಂದರವಾದ ಕಣಿವೆ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಮಹಾಬಲೇಶ್ವರ ಇದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದೆ. ಮಹಾಬಲೇಶ್ವರ ಗಿರಿಧಾಮವು ಪಶ್ಚಿಮ ಘಾಟ್ ವ್ಯಾಪ್ತಿಯಲ್ಲಿದೆ.