ಕೊರೊನಾ ಎರಡನೇ ಅಲೆ ಹಲವು ಕುಟುಂಬಗಳಲ್ಲಿ ದೊಡ್ಡ ಆಘಾತವನ್ನು ನೀಡಿದೆ. ಕೆಲ ಮನೆಗಳಲ್ಲಿ ಅಪ್ಪ – ಅಮ್ಮ ಬಲಿಯಾಗಿ ಮಕ್ಕಳು ಉಳಿದುಕೊಂಡಿದ್ದರೆ ಮತ್ತೆ ಕೆಲ ಮನೆಯಲ್ಲಿ ಕಣ್ಣೆದುರೇ ಬೆಳೆದುನಿಂತ ಮಕ್ಕಳನ್ನು ಹೆತ್ತವರು ಕಳೆದುಕೊಂಡಿದ್ದಾರೆ. ಈಗಲೂ ಸಹ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು, ಮನಕಲಕುವ ಘಟನೆಯೊಂದು ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ನಿವಾಸಿಗಳಾದ ಇಬ್ಬರು ಸಹೋದರಿಯರು ಒಂದೇ ದಿನ ಕೇವಲ ಎರಡು ಗಂಟೆಗಳ ಅಂತರದಲ್ಲಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಹೊಸನಗರ ಪಟ್ಟಣದ ಕ್ರಿಶ್ಚಿಯನ್ ಕಾಲೋನಿ ನಿವಾಸಿಗಳಾದ 59 ವರ್ಷದ ವ್ಯಾನಿ ಗೊನ್ಸಾಲ್ವಿಸ್ ಹಾಗೂ ಅವರ ಸಹೋದರಿ 50ವರ್ಷದ ಅಪ್ಲಿನಾ ಗೊನ್ಸಾಲ್ವಿಸ್ ಸಾವನ್ನಪ್ಪಿದವರಾಗಿದ್ದಾರೆ.
ದೀದಿ ಸರ್ಕಾರದಿಂದ ಪಶ್ಚಿಮ ಬಂಗಾಳ ಬಿಜೆಪಿಗೆ ಮತ್ತೊಂದು ‘ಶಾಕ್’
ಕೆಲ ದಿನಗಳ ಹಿಂದೆ ಇವರಿಗೆ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದ ಕಾರಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.