ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುತ್ತಿರುವುದರ ಬೆನ್ನಲ್ಲೇ ಇಬ್ಬರು ಹಾಲಿ ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವರುಗಳಾದ ಸಂತೋಷ್ ಗಂಗ್ವಾರ್ ಹಾಗೂ ರಮೇಶ್ ಪೋಕ್ರಿಯಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಸಂತೋಷ್ ಗಂಗ್ವಾರ್ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ರಮೇಶ್ ಪೋಕ್ರಿಯಾಲ್ ಶಿಕ್ಷಣ ಸಚಿವರಾಗಿದ್ದರು.
ಸಂಜೆಯೊಳಗಾಗಿ ಇನ್ನಷ್ಟು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆನ್ನಲಾಗಿದ್ದು, ಸಂಪುಟ ಪುನಾರಚನೆ ವೇಳೆ ಹೊಸ ಮುಖಗಳಿಗೆ ಮನ್ನಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದಾರೆನ್ನಲಾಗಿದೆ.