
ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ಮೇ ಒಂಬತ್ತರ ಒಳಗೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮೇ 9 ನೇ ತಾರೀಖಿನಿಂದ ಪ್ರತಿನಿತ್ಯ 5ಬಾರಿ ಹನುಮಾನ್ ಚಾಲೀಸಾ ಪಠಣೆಗೆ ಶ್ರೀರಾಮಸೇನೆ ಕರೆ ನೀಡಿದೆ.
ಎಲ್ಲ ದೇವಸ್ಥಾನಗಳು ಮತ್ತು ಮಠಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಿಸಲಾಗುವುದು. ಬೆಳಗ್ಗೆ ಐದು ಗಂಟೆಯಿಂದ ರಾತ್ರಿ ಎಂಟರ ತನಕ ಐದು ಬಾರಿ ಹನುಮಾನ್ ಚಾಲೀಸವನ್ನು ಪಠಿಸಲಾಗುವುದು. ಇದಕ್ಕೆ ಎಲ್ಲಾ ಸ್ವಾಮೀಜಿಗಳು ಮತ್ತು ದೇವಸ್ಥಾನದವರು ಬೆಂಬಲ ಸೂಚಿಸಿದ್ದಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
Big News: ಕೊರೊನಾ ಕೇಸ್ ಹೆಚ್ಚಳದ ಬೆನ್ನಲ್ಲೇ ʼಮಾಸ್ಕ್ʼ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ
ಇದೇ ವೇಳೆ ಆಜಾನ್ ನಿಲ್ಲಿಸುವವರೆಗೂ ಹನುಮಾನ್ ಚಾಲೀಸವನ್ನು ಪಠಿಸಲಾಗುವುದು. ಮಸೀದಿಗಳ ಬಳಿ ಇರುವ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ ಪಠಿಸಲಾಗುವುದು ಎಂದು ಕಲ್ಬುರ್ಗಿ ಜಿಲ್ಲೆಯ ಸಿದ್ದಲಿಂಗೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.