ಹೊರಗಡೆ ಹೋಗಿ ಬಂದಾಗ ಬಾಯಾರಿಕೆಗೆಂದು ಫ್ರಿಡ್ಜ್ ನಲ್ಲಿಟ್ಟ ಜ್ಯೂಸ್ ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಸಾಲೆ ಮಜ್ಜಿಗೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವುದಕ್ಕೂ ಕೂಡ ತುಂಬಾ ಸುಲಭ.
ಬೇಕಾಗುವ ಸಾಮಗ್ರಿಗಳು:
ಮೊಸರು ½ ಕಪ್, ಕಾಳುಮೆಣಸಿನ ಪುಡಿ ½ ಟೀ ಸ್ಪೂನ್, ಜೀರಿಗೆ ಪುಡಿ-1/2 ಟೇಬಲ್ ಸ್ಪೂನ್, 1 ಹಸಿಮೆಣಸು, ಸ್ವಲ್ಪ ಉಪ್ಪು, ಪುದೀನಾ-10 ಎಲೆ, 1 ಟೇಬಲ್ ಸ್ಪೂನ್-ಕೊತ್ತಂಬರಿ ಸೊಪ್ಪು, ನೀರು ಅಗತ್ಯವಿರುವಷ್ಟು.
ಒಂದು ಮಿಕ್ಸಿ ಜಾರಿಗೆ ಪುದೀನಾ, ಕೊತ್ತಂಬರಿಸೊಪ್ಪು, ಮೊಸರು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಹಸಿಮೆಣಸು ಉಪ್ಪು ಹಾಕಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಸೋಸಿಕೊಂಡು ಒಂದು ಗ್ಲಾಸ್ ಗೆ ಹಾಕಿಕೊಂಡು ಕುಡಿಯಿರಿ.