ಮಳೆಗಾಲ ಬಂದರೆ ಸಾಕು ಸೃಷ್ಟಿಯಾಗುವ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ನಗರ ಪ್ರದೇಶಗಳಂತೂ ಪುಟ್ಟ ಪುಟ್ಟ ದ್ವೀಪಗಳೇ ಆಗಿ ಹೋಗಿರುತ್ತೆ. ಇನ್ನೂ ರಸ್ತೆಗಳ ಕಥೆಯಂತೂ ಹೇಳೋದೇ ಬೇಡ ಹಾಗಿರುತ್ತೆ.
ಯಾವ ರಸ್ತೆ ಎಲ್ಲಿದೆ ಅನ್ನೊದೂ ಕೂಡಾ ಗೊತ್ತಾಗೋಲ್ಲ ಹಾಗಾಗಿ ಹೋಗಿರುತ್ತೆ. ಜನ ಜೀವನವೇ ಅಸ್ತವ್ಯಸ್ತ ಆಗ್ಹೋಗಿರುತ್ತೆ. ಆದರೂ ಕೂಡಾ ಕೆಲವರು ಆ ಸನ್ನಿವೇಶವನ್ನ ಎಂಜಾಯ್ ಮಾಡ್ತಿರುತ್ತಾರೆ. ಇತ್ತೀಚೆಗೆ ಗುರುಗ್ರಾಮ್ನಲ್ಲಿ ಇದೇ ರೀತಿಯ ದೃಶ್ಯವೊಂದು ನೋಡಲು ಸಿಕ್ಕಿದೆ.
ಗುರುಗ್ರಾಮದಲ್ಲಿ ಕಳೆದ 3-4 ದಿನಗಳಿಂದ ಒಂದೇ ಸಮನೆ ನೀರು ಸುರಿತಾನೇ ಇದೆ. ಇದರ ಪರಿಣಾಮ ರಸ್ತೆಗಳೆಲ್ಲ ನೀರಿನಿಂದ ತುಂಬಿಕೊಂಡಿದೆ. ಇದರ ಪರಿಣಾಮ ಟ್ರಾಫಿಕ್ಜಾಮ್ ಆಗ್ಹೋಗಿ ಜನರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.
ಆದರೆ ಇದೇ ಮಳೆಯ ನೀರ ಮಧ್ಯದಲ್ಲಿ ನಗರದ ನರಸಿಂಗ್ಪುರ ಬಳಿ ಸರ್ವೀಸ್ ರಸ್ತೆಯಲ್ಲಿ ಕ್ಯಾಬ್ವೊಂದು ನೀರಿನಲ್ಲಿ ಸಿಕ್ಕಾಕಿಕೊಂಡಿದೆ. ಸುಮಾರು ಮೂರು ಅಡಿಗಳಷ್ಟು ನೀರು ತುಂಬಿದ ನಂತರ ಕ್ಯಾಬ್ ಅದೇ ಮಳೆಯ ನೀರಿನಲ್ಲಿ ಅರ್ಧ ಮುಳ್ಹೋಗಿದೆ.
ನೀರ ಮಧ್ಯದಲ್ಲಿ ಸಿಕ್ಕಾಕಿಕೊಂಡ ಕಾರಿನಲ್ಲಿದ್ದ ಪ್ರಯಾಣಿಕರು ಹೊರ ಬರಲಾರದೇ ಪರದಾಡುತ್ತಿದ್ದರು. ಅದರಲ್ಲಿ ಓರ್ವ ವ್ಯಕ್ತಿ ಅದೇ ಕಾರಿನ ಟಾಪ್ ಮೇಲೆ ರಾಜನಂತೆ ಬಿಂದಾಸ್ ಆಗಿ ಕೂತಿರೋದು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಅನ್ನೊದಕ್ಕೆ ಇದು ಹಿಡಿದ ಕನ್ನಡಿ ಎಂದು ಹೇಳುತ್ತಿದ್ದಾರೆ.
ಅಷ್ಟೆ ಅಲ್ಲ ಹೀಗೆ ನಿಂತ ನೀರ ಮಧ್ಯೆ ಜನರು ಅನುಭವಿಸುತ್ತಿರೋ ಕಷ್ಟಗಳು ಹೇಗಿವೆ ಅನ್ನೊದು ಈ ವಿಡಿಯೋ ತೋರಿಸುತ್ತಿರುವ ಹಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಸಮಸ್ಯೆ ಇಷ್ಟು ಉಲ್ಬಣವಾಗುತ್ತಿದ್ದರೂ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದೇ ವಿಪರ್ಯಾಸ. ಇದು ಇದೊಂದೇ ನಗರದ ಸಮಸ್ಯೆ ಅಲ್ಲ, ದೇಶದ ಇನ್ನೂ ಅನೇಕ ನಗರದ ಸಮಸ್ಯೆ ಇದಾಗಿದೆ.