ರಾಜ್ಯದ ಕೆಲ ಭಾಗಗಳಲ್ಲಿ ಹಲವು ದಿನಗಳಿಂದ ಗುಡುಗು – ಸಿಡಿಲಿನಿಂದ ಕೂಡಿದ ಅಕಾಲಿಕ ಮಳೆಯಾಗುತ್ತಿದ್ದು, ಕಟಾವಿಗೆ ಬಂದು ನಿಂತಿದ್ದ ಭತ್ತ ನೆಲಕ್ಕುರುಳಿದೆ. ಅಲ್ಲದೆ ಭಾರಿ ಗಾಳಿಗೆ ಬಾಳೆ, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಯೂ ನಾಶವಾಗಿದೆ.
ಶುಕ್ರವಾರ ತಡರಾತ್ರಿಯೂ ಸಹ ಯಾದಗಿರಿಯ ಜಿಲ್ಲೆ, ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಹಗರಿಬೊಮ್ಮನಹಳ್ಳಿ ಪಟ್ಟಣದ ಚಿಂತ್ರಪಳ್ಳಿ ಬಳಿ ಸಿಡಿಲು ಬಡಿದು 11 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಶಾಲೆಗೆ ರಜೆ ಇದ್ದ ಕಾರಣ ಆತ ಹೊಲಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಇನ್ನು ಸಂತೆಬೆನ್ನೂರು ವ್ಯಾಪ್ತಿಯಲ್ಲಿ ಗುರುವಾರ ಸುರಿದ ವ್ಯಾಪಕ ಮಳೆಗೆ 24 ವಿದ್ಯುತ್ ಕಂಬಗಳು, ಪರಿವರ್ತಕಗಳು ನೆಲಕ್ಕುರುಳಿದ್ದು, ಇದರ ಪರಿಣಾಮ ವಿದ್ಯುತ್ ಇಲ್ಲದೆ ಜನತೆ ಪರದಾಡಿದ್ದಾರೆ.