ಮಳೆಗಾಲದಲ್ಲಿ ತುಂತುರು ಹನಿಯನ್ನು ಲೆಕ್ಕಿಸದೆ ಓಡಾಡಿ ನೆಗಡಿ, ಕೆಮ್ಮು ತಂದುಕೊಳ್ಳುತ್ತೇವೆ. ಇದನ್ನು ನಿವಾರಿಸುವ ಮನೆಮದ್ದುಗಳ ಬಗ್ಗೆ ತಿಳಿಯೋಣ.
ಒಂದು ಇಂಚು ಹಸಿ ಅರಿಶಿಣ, ಸ್ವಲ್ಪ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು 1 ಲೋಟ ನೀರಿಟ್ಟು ಕುದಿಸಿ. ಜೊತೆಗೆ ಇದರಲ್ಲಿ 3 ರಿಂದ 4 ಲವಂಗವನ್ನು ಹಾಕಿ. 10 ರಿಂದ 12 ಪುದೀನಾ ಎಲೆ, ಕಾಲು ಚಮಚ ಓಂ ಕಾಳನ್ನು ಹಾಕಿ. ಒಂದು ಲೋಟ ನೀರು ಅರ್ಧಕ್ಕೆ ಇಳಿಯಲಿ. ನಂತರ ಇದನ್ನು ಸೋಸಿ.
ಈ ಕಷಾಯ ತಣ್ಣಗಾದ ಮೇಲೆ ಒಂದು ಚಮಚ ಜೇನುತುಪ್ಪ ಸೇರಿಸಿ. ಹೀಗೆ ತಯಾರಿಸಿದ ಕಷಾಯವನ್ನು ಪ್ರತಿದಿನ ಎರಡು ಬಾರಿ ಸೇವಿಸಿ. ಮಕ್ಕಳಿಗಾದರೆ ಒಮ್ಮೆ ಕುಡಿಸಿ.
ಅರಿಶಿನ, ಶುಂಠಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಇನ್ಪೆಕ್ಷನ್ ಮತ್ತು ಅಲರ್ಜಿಯಿಂದ ಕಾಪಾಡುತ್ತದೆ. ಲವಂಗ, ಪುದೀನಾ ನೈಸರ್ಗಿಕವಾಗಿ ಆಂಟಿಬ್ಯಾಕ್ಟೀರಿಯಲ್ ಆಗಿದ್ದು, ಇದು ನೆಗಡಿ, ಗಂಟಲ ಕಿರಿಕಿರಿ ಮತ್ತು ಶೀತವನ್ನು ಗುಣಪಡಿಸುತ್ತದೆ. ಓಂ ಕಾಳು ಕೂಡ ಕಫವನ್ನು ನಿವಾರಿಸಲು ತುಂಬಾ ಉಪಯೋಗಕಾರಿಯಾಗಿದೆ.