ತಲೆಹೊಟ್ಟಿನ ಸಮಸ್ಯೆಗೆ ನೀವು ಹಲವು ಪ್ರಯೋಗಗಳನ್ನು ಮಾಡಿ ಸೋತಿದ್ದೀರಾ. ಈ ಕೆಲವು ಟಿಪ್ಸ್ ಗಳಿಂದ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಯಾವುವೆಂದಿರಾ?
ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವ ಆರಂಭಿಕ ಹಂತದಲ್ಲೇ ಅದಕ್ಕೆ ಚಿಕಿತ್ಸೆ ನೀಡಿ. ಸ್ವಲ್ಪ ಮಾತ್ರ ಕಾಣಿಸಿಕೊಂಡಿದೆ ಎಂಬ ನೆಪವೊಡ್ಡಿ ಅದನ್ನು ನಿರ್ಲಕ್ಷಿಸದಿರಿ. ಅದರಲ್ಲೂ ಮಳೆಗಾಲದಲ್ಲಿ ತಲೆ ಸರಿಯಾಗಿ ಒಣಗದ ಕಾರಣಕ್ಕೆ ಬಹುಬೇಗ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮಳೆಗಾಲಕ್ಕೆ ಬಿಸಿ ಬಿಸಿ ಪುದೀನಾ ‘ಸೂಪ್’
ಶುಂಠಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಬ್ಯಾಕ್ಟೀರಿಯಾ ಮತ್ತು ಶಿಲಿಂಧ್ರಗಳನ್ನು ನಾಶಪಡಿಸಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗುವುದು ಮಾತ್ರವಲ್ಲ ತಲೆಹೊಟ್ಟು ಕೂಡಾ ದೂರವಾಗುತ್ತದೆ.
ಮಕ್ಕಳ ಮೆದುಳನ್ನು ಚುರುಕುಗೊಳಿಸುವುದು ಹೇಗೆ…?
ಅಡುಗೆಯಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಬಳಸಿ. ಇದರಲ್ಲಿರುವ ವಿಟಮಿನ್ ಬಿ6 ತಲೆಹೊಟ್ಟು ನಿವಾರಿಸುತ್ತದೆ. ಮೊಸರು ಹಾಗೂ ಮೆಂತೆಯ ಹೇರ್ ಪ್ಯಾಕ್ ವಾರಕ್ಕೊಮ್ಮೆ ಮಾಡಿಕೊಳ್ಳಿ. ನಿಂಬೆರಸವನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಂಡರೂ ತಲೆಹೊಟ್ಟು ದೂರವಾಗುತ್ತದೆ.