ಮಳೆಗಾಲದಲ್ಲಿ ನಿಮ್ಮ ವಾಹನ ನೀವು ಹೇಳಿದಂತೆ ಕೇಳದೆ ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅವುಗಳಲ್ಲಿ ವಾಹನ ಸಂಚಾರಕರು ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.
ಧೋ ಎಂದು ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಹೆಚ್ಚು ವೇಗದಲ್ಲಿ ಸಂಚರಿಸದಿರಿ. ಅದು ಹೈ ವೆಯೇ ಆಗಿರಲಿ, ಸಣ್ಣ ರಸ್ತೆಯೇ ಆಗಿರಲಿ ಸಂಚಾರದ ವೇಗದಲ್ಲಿ ಮಿತಿ ಇರಲಿ. ಟಯರ್ ಗಳು ಸ್ಕಿಡ್ ಆಗುವ ಸಂದರ್ಭ ಜಾಸ್ತಿಯಿರುವುದರಿಂದ ಎಚ್ಚರವಾಗಿರಿ.
ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ
ಮಳೆ ಸುರಿಯುವ ವೇಳೆ ಎದುರಿನಿಂದ ಬರುವ ವಾಹನ ಸ್ಪಷ್ಟವಾಗಿ ಗೋಚರಿಸದಿರಬಹುದು. ಹಾಗಾಗಿ ನಿಮ್ಮ ಮುಂದೆ ಇರುವ ವಾಹನದ ಮಧ್ಯೆ ಸಾಕಷ್ಟು ಅಂತರ ಬಿಡಿ. ತೀರ ಹತ್ತಿರಕ್ಕೆ ಸಾಗುವುದು ಒಳ್ಳೆಯದಲ್ಲ. ಮಳೆಯ ಕಾರಣದಿಂದ ಬ್ರೇಕ್ ಕೂಡ ಸರಿಯಾಗಿ ಕೆಲಸ ಮಾಡದೇ ಇರಬಹುದು. ಹಾಗಾಗಿ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
ವೈಪರ್ ಸರಿಯಾಗಿ ಬಳೆಸಿ. ಮಂಜು ಹೆಚ್ಚಾದ ಸಂದರ್ಭದಲ್ಲಿ ಒಳಗಿನಿಂದ ಬಿಸಿಗಾಳಿ ಬಿಟ್ಟು ತೇವಾಂಶವನ್ನು ದೂರ ಮಾಡಿಕೊಳ್ಳಿ. ಪ್ರಯಾಣಕ್ಕೆ ಹೊರಡುವ ಮುನ್ನ ನಿಮ್ಮ ವಾಹನದ ಲೈಟ್ಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ವಾಹನದಲ್ಲಿ ಬಲ್ಬ್ ಇಲ್ಲದಿದ್ದರೆ ಅಪಘಾತವಾಗುವ ಸಂದರ್ಭ ಹೆಚ್ಚು. ಹಾಗಾಗಿ ಈ ಕುರಿತು ಗಮನ ಹರಿಸಿ.