alex Certify ಮಳೆಗಾಲದಲ್ಲಿ ಮೊಸರು, ಹುಳಿ ಪದಾರ್ಥಗಳ ಸೇವನೆ ಬೇಡ, ಹೀಗಿರಲಿ ನಿಮ್ಮ ‘ಆರೋಗ್ಯಕರ ಭೋಜನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಮೊಸರು, ಹುಳಿ ಪದಾರ್ಥಗಳ ಸೇವನೆ ಬೇಡ, ಹೀಗಿರಲಿ ನಿಮ್ಮ ‘ಆರೋಗ್ಯಕರ ಭೋಜನ’

ಮುಂಗಾರು ಮಳೆ ಪ್ರಾರಂಭವಾಗ್ತಿದ್ದಂತೆ ಪ್ರತಿ ಮನೆಯಲ್ಲೂ ಶೀತ, ಗಂಟಲು ನೋವು, ಜ್ವರದ ಸಮಸ್ಯೆಗಳು ಹೆಚ್ಚಾಗುತ್ತವೆ. ಮಳೆಗಾಲ ಬಂದ ಕೂಡ್ಲೆ ಅದ್ಯಾಕೆ ಹೀಗಾಗ್ತಿದೆ ಅನ್ನೋ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ವಾಸ್ತವವಾಗಿ ಇದಕ್ಕೆ ಕಾರಣ ಹವಾಮಾನವಲ್ಲ, ನೀವು ಸೇವಿಸುವ ಆಹಾರ. ಆಯುರ್ವೇದದ ಪ್ರಕಾರ ಹವಾಮಾನ ಬದಲಾದ ತಕ್ಷಣ, ನಾವು ತಿನ್ನುವ ಆಹಾರವನ್ನು ಕೂಡ ಬದಲಾಯಿಸಬೇಕು.

ಯಾಕಂದ್ರೆ ಬೇಸಿಗೆಯಲ್ಲಿ ಸೇವಿಸ್ತಾ ಇದ್ದ ಆಹಾರವನ್ನೇ ಮಳೆಗಾಲದಲ್ಲೂ ತಿಂದರೆ ಅದರ ಪರಿಣಾಮವು ಬದಲಾಗುತ್ತದೆ. ನಿಮ್ಮ ದೇಹಕ್ಕೆ ಪ್ರಯೋಜನವಾಗುವ ಬದಲು ಹಾನಿಯಾಗುತ್ತದೆ. ಆಯುರ್ವೇದವು ಪ್ರಪಂಚದ ಅತ್ಯಂತ ಹಳೆಯ ನೈಸರ್ಗಿಕ ವೈದ್ಯಕೀಯ ವಿಜ್ಞಾನವಾಗಿದೆ. ಅಲೋಪತಿಯಲ್ಲಿ ಕಾಯಿಲೆ ಬಂದ ನಂತರ ಯಾವ ಔಷಧಿ ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಆದ್ರೆ ಆಯುರ್ವೇದದಲ್ಲಿ ಅನಾರೋಗ್ಯವನ್ನು ತಪ್ಪಿಸಲು ಯಾವ ವಿಧಾನ ಅಥವಾ ಔಷಧವನ್ನು ಬಳಸಬೇಕೆಂಬುದರ ಬಗ್ಗೆ ಜ್ಞಾನವಿದೆ. ಅದರಂತೆ ಆಯುರ್ವೇದವು ದೇಹವನ್ನು ಹೇಗೆ ಸದೃಢವಾಗಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸುತ್ತದೆ.

ಮಳೆಗಾಲದಲ್ಲಿ ಹೊಟ್ಟೆಯ ಜೀರ್ಣಕಾರಿ ಶಕ್ತಿ ದುರ್ಬಲಗೊಳ್ಳುತ್ತದೆ. ಹಾಗಾಗಿ ಮಾನ್ಸೂನ್‌ನಲ್ಲಿ ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ನಮ್ಮ ದೇಹಕ್ಕೆ ಉಷ್ಣತೆಯನ್ನು ನೀಡುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವಂತಹ ವಸ್ತುಗಳನ್ನು ನಾವು ತಿನ್ನಬೇಕು. ಇದೇ ಕಾರಣಕ್ಕೆ ಮಾನ್ಸೂನ್‌ನಲ್ಲಿ ಮೊಸರು, ಉಪ್ಪಿನಕಾಯಿ ಅಥವಾ ಇತರ ಹುಳಿ ಪದಾರ್ಥಗಳನ್ನು ತಿನ್ನುವುದು ಸೂಕ್ತವಲ್ಲ. ಅಂತೆಯೇ  ಜಿಡ್ಡಿನ ವಸ್ತುಗಳನ್ನು ತಿನ್ನಬೇಡಿ. ಈ ಲೋಳೆಯಿಂದಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ.

ಅಲ್ಲದೆ, ಈ ಎಲ್ಲಾ ವಸ್ತುಗಳು ಸುಲಭವಾಗಿ ಜೀರ್ಣವಾಗುವುದಿಲ್ಲ. ಮಳೆಗಾಲದ ದಿನಗಳಲ್ಲಿ ಇವುಗಳ ಸೇವನೆಯಿಂದ ಗಂಟಲು ನೋವು, ಕರ್ಕಶ ಶಬ್ದ, ಹೊಟ್ಟೆ ಉಬ್ಬರ, ಜ್ವರದ ಸಮಸ್ಯೆ ಹೆಚ್ಚುತ್ತದೆ. ಮಳೆಗಾಲದಲ್ಲಿ ದೇಹ ಬೆಚ್ಚಗಾಗಲು ಶುಂಠಿ, ಇಂಗು, ಕಾಳುಮೆಣಸು ಮತ್ತು ಗೋಧಿಯನ್ನು ಸೇವಿಸಬೇಕು. ದೇಹದ ದೋಷಗಳನ್ನು ಹೋಗಲಾಡಿಸಲು ಉಪ್ಪು ಮತ್ತು ಸಿಹಿ ಪದಾರ್ಥಗಳನ್ನು ಮಳೆಗಾಲದಲ್ಲಿ ತಿನ್ನಬೇಕು. ಮಳೆಗಾಲದಲ್ಲಿ ತುಪ್ಪ ಮತ್ತು ಗೋಧಿ ಹಿಟ್ಟಿನಿಂದ ಮಾಡಿದ ಸಿಹಿಯಾದ ಪೂರಿಗಳನ್ನು ಹೆಚ್ಚಾಗಿ ತಿನ್ನಲು ಇದೇ ಕಾರಣ. ಇದು ದೇಹದ ಆಂತರಿಕ ಭಾಗಗಳನ್ನು ಬೆಚ್ಚಗಿಡುತ್ತದೆ.

ಮಾನ್ಸೂನ್ ಸಮಯದಲ್ಲಿ ಅನೇಕ ಹಬ್ಬಗಳು ಬರುತ್ತವೆ. ಈ ಸಮಯದಲ್ಲಿ  ಮಖಾನ ಲಡ್ಡು, ಚಿರೋಂಜಿ, ಕಲ್ಲಂಗಡಿ ಬೀಜಗಳು, ತೆಂಗಿನಕಾಯಿ ಮತ್ತು ಕಮಲದ ಬೀಜಗಳನ್ನು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಈ ಋತುವಿನಲ್ಲಿ ಬರುವ ಜನ್ಮಾಷ್ಟಮಿಯಲ್ಲಿ ಎಲ್ಲಾ ಬೀಜಗಳಿಂದ ತಯಾರಿಸಿದ ಸಿಹಿತಿಂಡಿಗಳು ಮತ್ತು ಪ್ರಸಾದವು ತುಂಬಾ ಇಷ್ಟವಾಗುತ್ತದೆ. ಮಳೆಗಾಲದಲ್ಲಿ ಸಾಂಬಾರು ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಶುಂಠಿ, ಲವಂಗ ಸೇರಿದಂತೆ ಇತರೆ ಮಸಾಲೆಗಳನ್ನು ಸೇವಿಸಿದರೆ ಶೀತ, ಜ್ವರ ನಿಮ್ಮನ್ನು ಕಾಡುವುದಿಲ್ಲ. ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶವೂ ಸಿಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...