ಮಳೆಯಲ್ಲಿ ರೋಗ ಜಾಸ್ತಿ. ಬೇಸಿಗೆಯಲ್ಲಿ ಬರುವ ಬೆವರು ಮಳೆಗಾಲದಲ್ಲಿರುವುದಿಲ್ಲ. ಇದ್ರಿಂದಾಗಿ ಮೊಡವೆ, ಕೂದಲು ಸಮಸ್ಯೆ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಫಂಗಲ್ ಇನ್ಫೆಕ್ಷನ್. ಆರಂಭದಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಂಡ್ರೆ ಸಮಸ್ಯೆಯಿಂದ ಬೇಗ ಹೊರ ಬರಬಹುದು.
ಮಳೆಗಾಲದಲ್ಲಿ ಆದ್ರತೆ ಹೆಚ್ಚು. ಕಾಲು, ಕೈಗಳು ಒದ್ದೆಯಾಗಿದ್ರೆ ಅದನ್ನು ಸರಿಯಾಗಿ ಸ್ವಚ್ಛಗೊಳಿಸದೆ ಹಾಗೆ ಬಿಡುವುದ್ರಿಂದ ಫಂಗಲ್ ಇನ್ಫೆಕ್ಷನ್ ಕಾಡುತ್ತದೆ. ಕೈ ಬೆರಳು, ಕಾಲಿನ ಬೆರಳುಗಳ ಮಧ್ಯೆಯೊಂದೇ ಅಲ್ಲ ಒದ್ದೆ ಬಟ್ಟೆ ಧರಿಸಿದ್ರೆ ಸೋಂಕು ಇಡೀ ದೇಹವನ್ನು ಆವರಿಸುತ್ತದೆ.
ಫಂಗಲ್ ಇನ್ಫೆಕ್ಷನ್ ನಿಂದ ರಕ್ಷಣೆ ಪಡೆಯಲು ಬಯಸಿದ್ದರೆ ಮೊದಲಿನಿಂದಲೇ ಎಚ್ಚರಿಕೆ ವಹಿಸಿ. ಯಾವುದೇ ಬಟ್ಟೆಯಾದ್ರೂ ಒದ್ದೆ ಇರದಂತೆ ನೋಡಿಕೊಳ್ಳಿ. ನೀರಿನ ಅಂಶ ಸಂಪೂರ್ಣ ಆರಿದ ಬಟ್ಟೆ ಧರಿಸಿ. ಸೋಂಕು ನಿವಾರಕ ಸೋಪ್ ಬಳಸಿ. ಔಷಧಿ ಮಳಿಗೆಯಲ್ಲಿ ಸಿಗುವ ಔಷಧಿಯನ್ನು ಕಣ್ಣುಮುಚ್ಚಿ ಸೇವಿಸಬೇಡಿ. ಆರಂಭದಲ್ಲಿಯೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಔಷಧಿ ಸೇವನೆ ಮಾಡಿ. ಸೋಂಕು ತಗುಲಿದವರಿಂದ ಸ್ವಲ್ಪ ದೂರವಿರಿ.