ಮಳೆಗಾಲದಲ್ಲಿ ನಮ್ಮ ಪಾದಗಳು ಹೆಚ್ಚು ಕೊಳಕಾಗುತ್ತವೆ. ರಸ್ತೆಯ ಕೊಳಕು ಮತ್ತು ಕೆಸರು ಪಾದದೊಂದಿಗೆ ಸೇರಿಕೊಂಡು ಅಸಹ್ಯವಾಗಿಸುತ್ತದೆ. ಪಾದಗಳ ಆರೈಕೆಗೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್.
ಮಳೆಯಲ್ಲಿ ಒದ್ದೆಯಾಗಿ ಮನೆಗೆ ಬಂದ ಬಳಿಕ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಕಾಲನ್ನು ತೊಳೆಯಿರಿ. ಬಳಿಕ ಆಂಟಿ ಬ್ಯಾಕ್ಟೀರಿಯಲ್ ಸೋಪಿನಿಂದ ತೊಳೆದು ಟವೆಲ್ ನಿಂದ ಒರೆಸಿಕೊಳ್ಳಿ. ಕೊಳಕು ಮತ್ತು ಸೋಂಕನ್ನು ತಡೆಗಟ್ಟಲು ನಿಮ್ಮ ಉಗುರನ್ನು ಚಿಕ್ಕದಾಗಿ ಕತ್ತರಿಸುವುದು ಮತ್ತು ಸ್ವಚ್ಛವಾಗಿಡುವುದು ಬಹಳ ಮುಖ್ಯ.
ಟವೆಲ್ ನಿಂದ ಒರೆಸಿದ ಬಳಿಕ ಸ್ವಲ್ಪ ಟಾಲ್ಕಂ ಪೌಡರ್ ಹಾಕಿ ಸೋಫಾ ಅಥವಾ ಸ್ಟೂಲ್ ಮೇಲೆ ಇಟ್ಟು ವಿಶ್ರಾಂತಿ ಕೊಡಿ. ಸ್ವಲ್ಪ ಹೊತ್ತು ಗಾಳಿಯಾಡಿದ ಬಳಿಕವೇ ಸಾಕ್ಸ್ ಧರಿಸಿ. ಮಳೆಗಾಲಕ್ಕೆ ಹೊಂದಿಕೆಯಾಗುವ ಚಪ್ಪಲಿ ಖರೀದಿಸಿ. ಎತ್ತರ ಹಿಮ್ಮಡಿಯ ಚಪ್ಪಲಿಗಳು ಸೂಕ್ತ.
ಕಾಲುಗಳು ಬಿರುಕು ಬಿಟ್ಟಿದ್ದರೆ ಮಲಗುವ ಮುನ್ನ ಕೋಲ್ಡ್ ಕ್ರೀಮ್ ಹಚ್ಚಿ. ಮಲಗುವ ಮುನ್ನ ಕಡ್ಡಾಯವಾಗಿ ಸಾಕ್ಸ್ ಧರಿಸಿ. ಹಾಗೂ ಪಾದಗಳಿಗೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ.