ಸುಡು ಬಿಸಿಲು, ವಿಪರೀತ ಸೆಖೆಯ ನಂತರ ಮಳೆಹನಿಗಳು ಭೂಮಿಯ ಮೇಲೆ ಬಿದ್ದಾಗ ಎಲ್ಲರಿಗೂ ಒಂದು ರೀತಿಯ ನೆಮ್ಮದಿ. ಮಳೆಗಾಲ ಶುರುವಾಯ್ತು ಅನ್ನೋ ಖುಷಿ. ಆದ್ರೆ ಮಳೆಗಾಲ ಆರಂಭದಲ್ಲೇ ಕೆಲವೊಂದು ಕಾಯಿಲೆಗಳನ್ನು ಕೂಡ ಹೊತ್ತು ತರುತ್ತದೆ.
ಮುಂಗಾರಿನ ಆರಂಭದಲ್ಲಂತೂ ರೋಗಗಳ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ಇವುಗಳಿಂದ ಪಾರಾಗಲು ಮಳೆಗಾಲದಲ್ಲಿ ನೀವು ಆಹಾರದ ಬಗ್ಗೆ ವಿಶೇಷ ಗಮನಹರಿಸಬೇಕು. ಕೆಲವೊಂದು ನಿರ್ದಿಷ್ಟ ಪದಾರ್ಥಗಳ ಸೇವನೆ ಮಾಡಬಾರದು. ಮಾಂಸಾಹಾರ ಕೂಡ ಅವುಗಳಲ್ಲೊಂದು.
ಧಾರ್ಮಿಕ ದೃಷ್ಟಿಯಿಂದ ನೋಡಿದರೆ ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗಾಗಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ವೈಜ್ಞಾನಿಕ ದೃಷ್ಟಿಯಿಂದಲೂ ಮುಂಗಾರಿನಲ್ಲಿ ಮಾಂಸಾಹಾರದಿಂದ ದೂರವಿರುವುದು ಉತ್ತಮ.
ಫಂಗಸ್ ಅಪಾಯ : ಮಾನ್ಸೂನ್ನಲ್ಲಿ ಭಾರೀ ಮಳೆಯಿಂದಾಗಿ ಗಾಳಿಯಲ್ಲಿ ತೇವಾಂಶವು ಹೆಚ್ಚಾಗುತ್ತದೆ. ನಂತರ ಶಿಲೀಂಧ್ರಗಳ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಪದಾರ್ಥಗಳು ಸಾಮಾನ್ಯಕ್ಕಿಂತ ವೇಗವಾಗಿ ಕೊಳೆಯಲು ಪ್ರಾರಂಭಿಸುತ್ತವೆ. ಯಾಕೆಂದರೆ ಮಳೆಗಾಲದಲ್ಲಿ ನೇರ ಸೂರ್ಯನ ಬೆಳಕಿನ ಬೆಳಕಿನ ಕೊರತೆ ಇರುತ್ತದೆ.
ಕಳಪೆ ಜೀರ್ಣಕ್ರಿಯೆ: ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ಹೆಚ್ಚು ಚುರುಕಾಗಿರುವುದಿಲ್ಲ. ಮಾಂಸಾಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಜೀರ್ಣಕ್ರಿಯೆ ದುರ್ಬಲವಾಗಿದ್ದರೆ ಆಹಾರವು ಕರುಳಿನಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ ಮತ್ತು ಆಹಾರ ವಿಷವಾಗುವ ಅಪಾಯವೂ ಇರುತ್ತದೆ.
ಪ್ರಾಣಿಗಳಿಗೂ ಅನಾರೋಗ್ಯ: ಮಾನ್ಸೂನ್ನಲ್ಲಿ ಕೀಟಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಚಿಕೂನ್ ಗುನ್ಯಾ ಮತ್ತು ಡೆಂಗ್ಯೂ ಸೊಳ್ಳೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಪ್ರಾಣಿಗಳು ಸಹ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವುಗಳ ಮಾಂಸ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಮೀನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಆದರೆ ಮಳೆಗಾಲದಲ್ಲಿ ತಿನ್ನಬೇಡಿ. ಭಾರೀ ಮಳೆಯಿಂದಾಗಿ ಎಲ್ಲಾ ಕೊಳಕು ನದಿ ಕೊಳ್ಳಗಳಿಗೆ ಹರಿಯುತ್ತದೆ. ಇದರಿಂದಾಗಿ ಮೀನುಗಳು ಕಲುಷಿತಗೊಳ್ಳುತ್ತವೆ. ಅದೇ ಮೀನನ್ನು ಸೇವಿಸಿದ್ರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.