
ಇಂಜಿನ್, ವಾಹನದ ಅತ್ಯಂತ ದುಬಾರಿ ಭಾಗವಾಗಿದೆ. ಎಂಜಿನ್ ವಿಫಲವಾದರೆ ಅದನ್ನು ದುರಸ್ತಿ ಮಾಡಲು ಸಾಕಷ್ಟು ಹಣ ಖರ್ಚು ಮಾಡಬೇಕಾಗಿ ಬರುತ್ತದೆ. ಕಾರಿನ ಬೇರೆ ಭಾಗಗಳಲ್ಲಿ ಸಣ್ಣಪುಟ್ಟ ಸಮಸ್ಯೆಯಾದರೆ ಹೆಚ್ಚೇನೂ ವೆಚ್ಚವಾಗುವುದಿಲ್ಲ. ನಿಮ್ಮ ಕಾರಿನ ಇಂಜಿನ್ ಫ್ರೀಜ್ ಆಗಿಬಿಟ್ಟರೆ ನೀವು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗಬಹುದು.
ಮಳೆಗಾಲದಲ್ಲಿ ಇಂಜಿನ್ ಡ್ಯಾಮೇಜ್ ಆಗುವ ಅಪಾಯ ಹೆಚ್ಚು. ನೀವು ವಾಹನವನ್ನು ತುಂಬಾ ಆಳವಾದ ನೀರಿನಲ್ಲಿ ತೆಗೆದುಕೊಂಡು ಹೋದಾಗ ಎಂಜಿನ್ ಫ್ರೀಝ್ ಆಗಿಬಿಡುತ್ತದೆ.
ಮಳೆಗಾಲದಲ್ಲಿ ರಸ್ತೆಗಳಲ್ಲೂ ನೀರು ತುಂಬಿಕೊಂಡಿರುತ್ತದೆ. ಆ ನೀರಿನ ನಡುವೆಯೇ ಕಾರು ಚಲಾಯಿಸಿಕೊಂಡು ಹೋಗುತ್ತೀರ. ಆ ಸಮಯದಲ್ಲಿ ಎಂಜಿನ್‌ನೊಳಕ್ಕೆ ನೀರು ನುಗ್ಗಿ ಅದು ಫ್ರೀಝ್ ಆಗಬಹುದು. ಹಾಗಾಗಿ ಮಳೆಗಾಲದಲ್ಲಿ ಈ ಬಗ್ಗೆ ಜಾಗರೂಕರಾಗಿರಬೇಕು. ನೀರು ತುಂಬಿದ ರಸ್ತೆಗಳಲ್ಲಿ ಹೋಗುವ ಮುನ್ನ ಯೋಚಿಸಿ. ರಸ್ತೆಯಲ್ಲಿ ಯಾವ ಮಟ್ಟಕ್ಕೆ ನೀರಿದೆ ಅನ್ನೋದನ್ನು ಮೊದಲು ಗಮನಿಸಿ.
ನೀರು ತುಂಬಾ ಇದ್ದು, ಅದು ನಿಮ್ಮ ಕಾರಿನ ಎಂಜಿನ್ ತಲುಪಬಹುದು ಅಥವಾ ನಿಮ್ಮ ಕಾರಿನ ಬಾನೆಟ್ ಅದರಲ್ಲಿ ಮುಳುಗಬಹುದು, ಆಗ ನೀವು ಹೊರಬರಬಾರದು. ಏಕೆಂದರೆ, ಇಂಜಿನ್‌ಗೆ ನೀರು ಬಂದರೆ ಅದು ನಿಮಗೆ ದೊಡ್ಡ ನಷ್ಟವಾಗಬಹುದು. ಆದಾಗ್ಯೂ, ಎಂಜಿನ್ ಅನ್ನು ತ್ವರಿತವಾಗಿ ನೀರು ಪಡೆಯದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೂ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯಕ.