ಮಳೆಗಾಲದ ಮಳೆಯಲ್ಲಿ ಪ್ರತಿಯೊಬ್ಬರೂ ಮಿಂದೇಳಲು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನೀರಿನಲ್ಲಿ ನೆನೆದ ಕೂದಲು ಸಮಸ್ಯೆಗೆ ಕಾರಣವಾಗುತ್ತದೆ. ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ಮಳೆಗಾಲದಲ್ಲಿ ಬಹುತೇಕರನ್ನು ಕಾಡುತ್ತದೆ. ಕೂದಲಿಗೆ ಮಳೆಗಾಲದಲ್ಲಿ ವಿಶೇಷ ಆರೈಕೆ ಅಗತ್ಯ.
ಮಳೆಗಾಲದಲ್ಲಿ ನಿಂಬೆ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ. ಇದು ಆರೋಗ್ಯಕ್ಕೊಂದೇ ಅಲ್ಲ ಚರ್ಮಕ್ಕೂ ಬಹಳ ಒಳ್ಳೆಯದು. ಹೊಟ್ಟಿನ ಸಮಸ್ಯೆಯನ್ನು ಕೂಡ ನಿಂಬೆ ಹಣ್ಣು ಕಡಿಮೆ ಮಾಡುತ್ತದೆ. ನಿಂಬೆ ಹಣ್ಣನ್ನು ಕತ್ತರಿಸಿ ಕೂದಲ ಬುಡಕ್ಕೆ ನಿಧಾನವಾಗಿ ತಿಕ್ಕಿ. ಐದು ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದ್ರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಮೆಂತ್ಯೆಗಿದೆ. ಅದ್ರಲ್ಲಿರುವ ಅಮಿನೋ ಆಮ್ಲ ಹಾಗೂ ಪ್ರೋಟಿನ್ ಕೂದಲಿಗೆ ಬಹಳ ಒಳ್ಳೆಯದು. ಮೆಂತ್ಯೆ ಸೇವನೆ ಕೂದಲಿಗೆ ಬಹಳ ಲಾಭದಾಯಕ. ಮೆಂತ್ಯೆ ಪೇಸ್ಟ್ ಮಾಡಿ ಕೂಡ ಕೂದಲಿಗೆ ಹಚ್ಚಿಕೊಳ್ಳಬಹುದು. ಕೂದಲು ಉದುರುವ ಸಮಸ್ಯೆ ದೂರ ಮಾಡಿ ಕೂದಲು ಗಟ್ಟಿಯಾಗಲು ಮೆಂತ್ಯೆ ನೆರವಾಗುತ್ತದೆ.
ಅಡುಗೆ ಸೋಡಾ ಕೂಡ ನಿಮ್ಮ ಕೂದಲು ಹೊಟ್ಟಿನ ಸಮಸ್ಯೆ ದೂರ ಮಾಡುತ್ತದೆ. ಸ್ವಲ್ಪ ಅಡುಗೆ ಸೋಡಾಕ್ಕೆ ನೀರು ಬೆರೆಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಅದನ್ನು ಕೂದಲಿನ ಬುಡಕ್ಕೆ ಹಚ್ಚಿ 5 ನಿಮಿಷ ಬಿಡಿ. ನಂತ್ರ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.