ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಬಹಳಷ್ಟು ಮಂದಿ ಇಷ್ಟಪಡ್ತಾರೆ. ಆದರೆ ಮಾನ್ಸೂನ್‌ನಲ್ಲಿ ಐಸ್ ಕ್ರೀಂ ಸೇವಿಸುವುದು ದೇಹಕ್ಕೆ ಹಾನಿಕರ. ನೀವು ಕೂಡ ಮಾನ್ಸೂನ್‌ನಲ್ಲಿ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಿದ್ದರೆ ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ. ಯಾವುದೇ ಸೀಸನ್‌ನಲ್ಲಾದ್ರೂ ಐಸ್‌ಕ್ರೀಂ ತಿನ್ನುವುದು ನಿಮ್ಮ ಗಂಟಲಿಗೆ ಒಳ್ಳೆಯದಲ್ಲ. ಅಂಥದ್ರಲ್ಲಿ ಮಳೆಗಾಲದಲ್ಲಿ ತಿಂದರಂತೂ ಅನಾನುಕೂಲಗಳು ಇನ್ನೂ ಜಾಸ್ತಿ.
ಎದೆಯ ಬಿಗಿತ: ಮಾನ್ಸೂನ್ ಸಮಯದಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಐಸ್‌ಕ್ರೀಂ ತಿಂದರೆ ದೇಹಕ್ಕೆ ಇನ್ನಷ್ಟು ಉಷ್ಣವಾಗುತ್ತದೆ. ಐಸ್ ಕ್ರೀಮ್ ಸೇವನೆಯಿಂದ ನೆಗಡಿ, ಕೆಮ್ಮು, ಎದೆ ಬಿಗಿತದಂತಹ ಸಮಸ್ಯೆಗಳು ಎದುರಾಗುತ್ತವೆ. ಮಳೆಗಾಲದಲ್ಲಿ ನೀವು ಸಿಹಿ ತಿನ್ನಲು ಹಂಬಲಿಸುತ್ತಿದ್ದರೆ ಹಲ್ವಾವನ್ನು ಸೇವಿಸಬಹುದು. ಹೆಸರುಬೇಳೆಯನ್ನು ತುಪ್ಪದಲ್ಲಿ ಹುರಿದು ಆರೋಗ್ಯಕರ ಪುಡ್ಡಿಂಗ್ ಮಾಡಿಕೊಂಡು ಸವಿಯಿರಿ.
ತಲೆನೋವು: ಮಾನ್ಸೂನ್‌ನಲ್ಲಿ ಐಸ್ ಕ್ರೀಮ್, ತಣ್ಣೀರು ಅಥವಾ ಐಸ್ ಅನ್ನು ಸೇವಿಸುವುದರಿಂದ ಮೆದುಳು ಫ್ರೀಜ್ ಆಗುತ್ತದೆ. ಐಸ್ ಕ್ರೀಮ್ ತಣ್ಣಗಿರುತ್ತದೆ ಅದನ್ನು ಸೇವಿಸುವುದರಿಂದ ಮೆದುಳಿನ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ತೀವ್ರ ತಲೆನೋವು ಉಂಟುಮಾಡುತ್ತದೆ. ಸೈನಸ್ ಸಮಸ್ಯೆ ಇರುವವರು ಮಳೆಗಾಲದಲ್ಲಿ ಐಸ್ ಕ್ರೀಮ್ ಸೇವಿಸಬಾರದು.
ಗಂಟಲಿನ ಸೋಂಕು: ಮಾನ್ಸೂನ್‌ನಲ್ಲಿ ಐಸ್‌ಕ್ರೀಮ್‌ನ ಅತಿಯಾದ ಸೇವನೆಯು ಗಂಟಲಿನ ಸೋಂಕಿಗೆ ಕಾರಣವಾಗಬಹುದು. ಐಸ್ ಕ್ರೀಂ ಸೇವಿಸುವುದರಿಂದ ಗಂಟಲಿನ ಸೋಂಕಿನೊಂದಿಗೆ ಕಫದ ಸಮಸ್ಯೆಯೂ ಉಂಟಾಗುತ್ತದೆ. ಕಫದಿಂದಾಗಿ ಕೆಮ್ಮು ಮತ್ತು ಜ್ವರ ಕೂಡ ಬರಬಹುದು.
ಜೀರ್ಣ ಶಕ್ತಿ ದುರ್ಬಲ: ಮಾನ್ಸೂನ್ ಸಮಯದಲ್ಲಿ ಸೋಂಕು ಮತ್ತು ರೋಗಗಳ ಅಪಾಯವು ಹೆಚ್ಚಾಗುತ್ತದೆ. ಅದಕ್ಕಾಗಿಯೇ ನಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವಿಸಬೇಕು. ಮುಂಗಾರಿನಲ್ಲಿ ಐಸ್‌ಕ್ರೀಂ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದಿಲ್ಲ. ಜೀರ್ಣಶಕ್ತಿ ದುರ್ಬಲವಾಗುತ್ತದೆ.