ಮಳೆಗಾಲದಲ್ಲಿ ಸೋಂಕು ವ್ಯಾಧಿಗಳು ಹರಿಸುವ ಸಂಭವ ಅಧಿಕ. ಅದಕ್ಕೆ ಈ ಸೀಸನ್ ನಲ್ಲಿ ಕೈಗಳ ಶುಭ್ರತೆಯ ವಿಷಯದಲ್ಲಿ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು.
ಮಳೆಗಾಲದಲ್ಲಿ ಆಹಾರ, ಕುಡಿಯುವ ನೀರು ಕಲುಷಿತಗೊಳ್ಳುವ ಸಂಭವ ಅಧಿಕವಾಗಿರುತ್ತದೆ. ಈ ಕಲುಷಿತ ಆಹಾರ ಮತ್ತು ನೀರು ಆರೋಗ್ಯವಾಗಿ ಇರುವವರನ್ನು ಸಹ ಅನಾರೋಗ್ಯ ಗೊಳಿಸುತ್ತದೆ. ಇದರಿಂದ ಬೇಧಿ, ಟೈಫಾಯ್ಡ್, ಕಾಮಾಲೆ, ಹೊಟ್ಟೆಯಲ್ಲಿ ಹುಳು ಉಂಟಾಗುತ್ತದೆ.
ಈ ಸೀಸನ್ ನಲ್ಲಿ ಚಿಕ್ಕ ಮಕ್ಕಳ ವಿಷಯದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಬೇಕು. ಒಂದು ವರ್ಷದ ಒಳಗಿನ ಮಕ್ಕಳಿಗೆ ರೋಗನಿರೋಧಕ ವ್ಯವಸ್ಥೆ ಬಲಹೀನವಾಗಿ ಇರುತ್ತದೆ. ಆದ್ದರಿಂದ ಅವರು ತ್ವರಿತವಾಗಿ ಕಾಯಿಲೆಗಳಿಗೆ ಒಳಗಾಗುತ್ತಾರೆ. ಬ್ಯಾಕ್ಟೀರಿಯಾ, ವೈರಸ್ ಭಾದಿತರಿಂದ ಶುದ್ಧತೆಯ ಬಗ್ಗೆ ಸರಿಯಾಗಿ ಗಮನ ಕೊಡದ ಆರೋಗ್ಯವಂತರಿಗೂ ಕಾಯಿಲೆ ಉಂಟಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಗಲಿಬಿಲಿ, ನೋವು, ಕಣ್ಣು ಸುತ್ತುವುದು, ವಾಂತಿ, ನೀರು ಬೇಧಿ, ಜ್ವರ, ಡಿಹೈಡ್ರೇಷನ್ ನಂತಹ ಸಮಸ್ಯೆಗಳು ತಲೆಯೆತ್ತುತ್ತವೆ.
ಹೀಗಾಗಿ ಅಡುಗೆ ಮಾಡುವಾಗ, ತಿನ್ನುವಾಗ, ಇತರ ಕೆಲಸ ಮಾಡುವ ಮುನ್ನ ಕೈಗಳನ್ನು ಶುಭ್ರವಾಗಿಟ್ಟುಕೊಳ್ಳುವುದು ಎಲ್ಲದಕ್ಕಿಂತ ಮುಖ್ಯ. ಸಾಕಷ್ಟು ಸಂದರ್ಭದಲ್ಲಿ ವ್ಯಾಧಿಗಳು ಕೈಗಳ ಮೂಲಕ ಹರಡುತ್ತದೆ. ಕಾಯಿಸಿ ಆರಿಸಿದ ಫಿಲ್ಟರ್ ಮಾಡಿದ ನೀರನ್ನು ಸೇವಿಸಬೇಕು. ಮಳೆಗಾಲದಲ್ಲಿ ಮೊದಲ ನಾಲ್ಕು ವಾರದಲ್ಲಿ ಬ್ಯಾಕ್ಟೀರಿಯಾ, ವೈರಸ್ ತೀವ್ರತೆ ಅಧಿಕವಾಗಿರುತ್ತದೆ. ಆಹಾರ ಪದಾರ್ಥಗಳ ಪಾತ್ರೆಗಳ ಮೇಲೆ ಮುಚ್ಚಿರಬೇಕು. ಇಲ್ಲದಿದ್ದರೆ ನೊಣ ಕುಳಿತು ಅಂತಹ ಆಹಾರ ಸೇವಿಸಿದಾಗ ಟೈಫಾಯ್ಡ್ ಉಂಟಾಗುವ ಸಂಭವನೀಯತೆ ಅಧಿಕ. ಈ ಸೀಸನ್ ನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುವ ಕಾರಣ ಸಲಾಡ್ ಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ತಿನ್ನದೆ ಇದ್ದರೆ ಮತ್ತೂ ಒಳ್ಳೆಯದು. ರಸ್ತೆ ಮೇಲೆ ಮಾರುವ ಫಾಸ್ಟ್ ಫುಡ್, ಐಸ್ ಕ್ರೀಮ್ ತಿನ್ನಬಾರದು. ಇದರಿಂದ ವಾಂತಿ-ಬೇಧಿ ಡಿಹೈಡ್ರೇಶನ್ ಉಂಟಾಗುತ್ತದೆ.