ಬೇಕಾಗುವ ಸಾಮಗ್ರಿ :ಫ್ರೀಜ್ ಮಾಡಿಟ್ಟ ಮೆಕ್ಕೆಜೋಳ : 900 ಗ್ರಾಂ, ಗ್ರೀನ್ ಚಿಲ್ಲಿ – 2 ಚಮಚ, ಕಾರದ ಪುಡಿ – 1/2 ಚಮಚ, ಕ್ಯುಮಿನ್ ಪೌಡರ್ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕ್ಯಾಪ್ಸಿಕಂ – 2, ಶುಂಠಿ ರಸ – 2 ಚಮಚ, ನಿಂಬು ರಸ – 2 ಚಮಚ, ಕೊತ್ತಂಬರಿ ಸೊಪ್ಪು – 1/4 ಕಪ್, ಕಾಳು ಮೆಣಸಿನ ಪುಡಿ – 1/2 ಚಮಚ, ಬ್ಲಾಕ್ ಸಾಲ್ಟ್ – 1ಚಮಚ, ಟೊಮ್ಯಾಟೋ (ಸಣ್ಣಗೆ ಹೆಚ್ಚಿದ್ದು) – 1 ಕಪ್, ಈರುಳ್ಳಿ – 1,
ಮಾಡುವ ವಿಧಾನ : ಮೊದಲು ಎಲ್ಲಾ ತರಕಾರಿಗಳು ಸಣ್ಣಗೆ ಹೆಚ್ಚಿಕೊಂಡು ಒಂದು ಬೌಲ್ನಲ್ಲಿ ಪ್ರತ್ಯೇಕವಾಗಿ ತೆಗೆದಿಡಿ. ಈಗ ಉಪ್ಪು, ಬ್ಲಾಕ್ ಸಾಲ್ಟ್, ಕ್ಯುಮಿನ್ ಪೌಡರ್, ಕಾಳು ಮೆಣಸಿನ ಪುಡಿ ಹಾಗೂ ಕಾರದಪುಡಿಯನ್ನ ಮಿಶ್ರಣ ಮಾಡಿಕೊಂಡು ಒಂದು ಬೌಲ್ನಲ್ಲಿ ಇಟ್ಟುಕೊಳ್ಳಿ.
ಒಂದು ನಾನ್ ಸ್ಟಿಕ್ ಪ್ಯಾನ್ನ್ನು ಮಧ್ಯಮ ಉರಿಯಲ್ಲಿ ಸ್ಟೌ ಮೇಲೆ ಇಟ್ಟುಕೊಳ್ಳಿ. ಇದಕ್ಕೆ ಎಣ್ಣೆಯನ್ನ ಹಾಕಿ ಅದಕ್ಕೆ ಮೆಕ್ಕೆ ಜೋಳವನ್ನ ಹಾಕಿ 6-7 ನಿಮಿಷಗಳ ಕಾಲ ಬೇಯಿಸಿ, ಈ ಮೆಕ್ಕೆಜೋಳ ಬಂಗಾರ ಕಂದುಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಗ್ಯಾಸ್ ಆಫ್ ಮಾಡಿ.
ಮೊದಲೇ ಕತ್ತರಿಸಿ ಇಟ್ಟುಕೊಂಡಿದ್ದ ತರಕಾರಿಗೆ ಮಸಾಲೆ ಪದಾರ್ಥಗಳ ಮಿಶ್ರಣ, ಕೊತ್ತಂಬರಿ ಸೊಪ್ಪು ಹಾಗೂ ಮೆಕ್ಕೆಜೋಳವನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆ ರಸ ಹಾಗೂ ಶುಂಠಿ ರಸವನ್ನ ಹಾಕಿ. ನಿಮ್ಮ ಕಾರ್ನ್ ಚಾಟ್ ಇದೀಗ ಸವಿಯಲು ಸಿದ್ಧ