ಈ ಸುದ್ದಿಯು ಬಾಲಿವುಡ್ನ ಎಲ್ಲಾ ಅಭಿಮಾನಿಗಳಿಗೆ ಬಹುದೊಡ್ಡ ಶಾಕ್ ನೀಡಬಹುದು. ಆದರೆ ಬಿಟೌನ್ನಲ್ಲಿ ನಡೆಯುತ್ತಿರುವ ಟಾಕ್ನ ಪ್ರಕಾರ ಅರ್ಜುನ್ ಕಪೂರ್ ತಮ್ಮ ಲೇಡಿ ಲವ್ ಮಲೈಕಾ ಅರೋರಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಇದೀಗ ಬಾಳ ಪಯಣದಲ್ಲಿ ದೂರಾಗಿದೆ ಎನ್ನಲಾಗಿದೆ. ಈ ಜೋಡಿ ತಮ್ಮ ಸಂಬಂಧವನ್ನು ಮುರಿದುಕೊಂಡಿದೆ ಎಂಬ ಸುದ್ದಿ ಬಿ ಟೌನ್ನಲ್ಲಿ ಜೋರಾಗಿ ಹಬ್ಬಿದೆ.
ಮಲೈಕಾ ಅರೋರಾ, ಅರ್ಜುನ್ ಕಪೂರ್ ಜೊತೆಯಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಈ ಜೋಡಿ ಬಾಲಿವುಡ್ನಲ್ಲಿ ಫೇಮಸ್ ಆಗಿತ್ತು. 2019ರಲ್ಲಿ ಈ ಜೋಡಿಯು ತಮ್ಮ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿತ್ತು.
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಸೋಶಿಯಲ್ ಮೀಡಿಯಾದ ತಮ್ಮ ಖಾತೆಗಳಲ್ಲಿ ಒಂದಾಗಿ ಇರುವ ಫೋಟೋಗಳನ್ನು ಅನೇಕ ಬಾರಿ ಹಂಚಿಕೊಂಡಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ ಬ್ರೇಕಪ್ ಬಳಿಕ ಮಲೈಕಾ ಅರೋರಾ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಅವರು ಮನೆಯಿಂದ ಹೊರಗಡೆ ಕಾಲೇ ಇಡುತ್ತಿಲ್ಲವಂತೆ. ಆರು ದಿನಗಳಿಂದ ಮಲೈಕಾ ಅರೋರಾ ಮನೆಯಲ್ಲಿ ಒಬ್ಬರೇ ಇದ್ದಾರೆ ಎನ್ನಲಾಗಿದೆ. ಅತೀವವಾಗಿ ದುಃಖಿತರಾಗಿರುವ ಮಲೈಕಾ ಹೊರ ಪ್ರಪಂಚದಿಂದ ದೂರವೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಅರ್ಜುನ್ ಕಪೂರ್ ತಮ್ಮ ಸಹೋದರಿ ರಿಯಾ ಕಪೂರ್ ಮನೆಗೆ ಔತಣಕೂಟಕ್ಕೆ ಆಗಮಿಸಿದ್ದರು. ರಿಯಾ ಕಪೂರ್ ನಿವಾಸ ಮಲೈಕಾ ಅರೋರಾ ನಿವಾಸದ ಸಮೀಪವೇ ಇರೋದ್ರಿಂದ ಸಾಮಾನ್ಯವಾಗಿ ಈ ಔತಣಕೂಟಕ್ಕೆ ಮಲೈಕಾ ಹಾಗೂ ಅರ್ಜುನ್ ಒಟ್ಟಾಗಿಯೇ ಹೋಗುತ್ತಿದ್ದರು. ಆದರೆ ಈ ಬಾರಿ ಅರ್ಜುನ್ ಕಪೂರ್ ಒಬ್ಬರೇ ಬಂದಿದ್ದರು ಮಾತ್ರವಲ್ಲದೇ ಔತಣ ಕೂಡ ಮುಗಿದ ಬಳಿಕವೂ ಅವರು ಮಲೈಕಾ ನಿವಾಸಕ್ಕೆ ಭೇಟಿ ನೀಡದೇ ಹಾಗೇ ತೆರಳಿದ್ದರು ಎನ್ನಲಾಗಿದೆ.
ನಟಿ ಮಲೈಕಾ ಅರೋರಾ, ನಟ ಅರ್ಬಾಜ್ ಖಾನ್ ಜೊತೆ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿ 2016ರಲ್ಲಿ ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡಿದೆ. ಈ ದಂಪತಿಗೆ ಅರ್ಹಾನ್ ಎಂಬ ಪುತ್ರನಿದ್ದಾನೆ.