alex Certify ಮಲೈಕಾ ಅರೋರಾ ಫಿಟ್‌ ಆಗಿರಲು ಪ್ರತಿದಿನ ಮಾಡ್ತಾರಂತೆ ಈ ವ್ಯಾಯಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೈಕಾ ಅರೋರಾ ಫಿಟ್‌ ಆಗಿರಲು ಪ್ರತಿದಿನ ಮಾಡ್ತಾರಂತೆ ಈ ವ್ಯಾಯಾಮ

ಫಿಟ್ ನೆಸ್ ಕಾಪಾಡಿಕೊಳ್ಳುವ ಬಾಲಿವುಡ್ ನಟಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಅವರು ಪ್ರತಿಬಾರಿ ತನ್ನ ಇನ್ ಸ್ಟಾಗ್ರಾಂನಲ್ಲಿ ತಮ್ಮ ಫಿಟ್ ನೆಸ್ ರಹಸ್ಯವನ್ನು ಹಂಚಿಕೊಳ್ಳುತ್ತಾರೆ. ತಮ್ಮ ಆಹಾರ ಕ್ರಮ, ವ್ಯಾಯಾಮ, ಯೋಗದ ಬಗ್ಗೆ ವಿಡಿಯೋ, ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಅದರಂತೆ ಇತ್ತೀಚಿಗೆ ಅವರು ಕಾಲುಗಳನ್ನು ಬಲಪಡಿಸಲು ಅವರು ಯಾವ ಯೋಗಾಸನ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ, ನೀವೂ ಮಾಡಿ.

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಹೈಕೋರ್ಟ್ ಮಹತ್ವದ ಆದೇಶ; ಪೊಲೀಸ್ ಅಧಿಕಾರಿಗಳಿಗೆ ರಿಲೀಫ್

ಮಾಲಾಸನ : ಇದು ತೊಡೆಗಳು ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಮೊಣಕಾಲು ಮತ್ತು ಕೀಲುಗಳ ನೋವನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ಹೊಟ್ಟೆಯನ್ನು ಬಲಗೊಳಿಸುತ್ತದೆ.

ನಿಮ್ಮ ಭುಜಗಳ ಅಗಲಕ್ಕೆ ಪಾದಗಳನ್ನು ಮತ್ತು ಮೊಣಕಾಲುಗಳನ್ನು ಮಡಚಿ ಪಾದಗಳ ಮೇಲೆ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ. ತೊಡೆಗಳನ್ನು ದೂರ ಸರಿಸಿ ಉಸಿರಾಡಿ. ತೊಡೆಯ ಮಧ್ಯೆದಲ್ಲಿ ನಿಮ್ಮ ತಲೆ ಇರುವಂತೆ ನೋಡಿಕೊಳ್ಳಿ.

ನಮಸ್ಕಾರ ಮಾಡುವ ರೀತಿಯಲ್ಲಿ ಅಂಗೈಗಳನ್ನು ಜೋಡಿಸಿ ಮೊಣಕೈಗಳನ್ನು ನೆಲಕ್ಕೂರಿ ಮೊಣಕಾಲಿನ ಹಿಂಭಾಗವನ್ನು ಮೇಲೆತ್ತಿ. ಹಣೆಯ ಭಾಗವನ್ನು ಒಳತೊಡೆಯಿಂದ ಒತ್ತಿ, ಕೈಗಳನ್ನು ಮುಂದಕ್ಕೆ ಮಾಡಿ.

ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿ ನೀಡಲು ನಿರ್ಧಾರ

ಉತ್ಕಟಾಸನ : ಇದು ಇಡೀ ದೇಹವನ್ನು ಬಲಪಡಿಸುತ್ತದೆ. ದೇಹದ ಸಮತೋಲನ ಕಾಪಾಡುತ್ತದೆ. ದೇಹದ ಶಕ್ತಿಯನ್ನು ವೃದ್ಧಿಸುತ್ತದೆ.

ನೀವು ನಿಂತುಕೊಂಡು ನಿಮ್ಮ ಕಾಲುಗಳು ಮತ್ತು ಸೊಂಟವನ್ನು ಅಗಲವಾಗಿಸಿ. ಅಂಗೈಗಳು ಪರಸ್ಪರ ಎದುರಾಗಿರುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ. ಎರಡು ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸಿಟ್ ಬ್ಯಾಕ್ ಸ್ಥಾನಕ್ಕೆ ಬನ್ನಿ. ಹಾಗೇ ಮಾಡುವಾಗ ನಿಮ್ಮ ಹಿಮ್ಮಡಿಯ ಮೇಲೆ ಹೆಚ್ಚಿನ ತೂಕವನ್ನು ಹಾಕಿ. ಇದನ್ನು 60ಸೆಕೆಂಡುಗಳ ಕಾಲ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...