ಮಲೇಶಿಯಾ ಮಾರುಕಟ್ಟೆಗೆ ಕರ್ನಾಟಕದ ಗುಲಾಬಿ ಈರುಳ್ಳಿ ಲಗ್ಗೆ ಇಟ್ಟಿದ್ದು, ಉತ್ತಮ ಬೆಲೆಯೂ ಸಿಕ್ಕಿರುವ ಕಾರಣ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
‘ಬೆಂಗಳೂರು ಗುಲಾಬಿ ಈರುಳ್ಳಿ’ ಎಂದೇ ಹೆಸರಾಗಿರುವ ಇದನ್ನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಸಾದಲಿ ತೋಟಗಾರಿಕಾ ರೈತರ ಉತ್ಪಾದಕ ಕಂಪನಿ ಕ್ಲಸ್ಟರ್ ವ್ಯಾಪ್ತಿಯ ರೈತರು ಬೆಳೆದಿದ್ದಾರೆ.
ಇವರು ಬೆಳೆದ ಬೆಂಗಳೂರು ಗುಲಾಬಿ ಈರುಳ್ಳಿಯನ್ನು ಕಂಟೇನರ್ ನಲ್ಲಿ ಚೆನ್ನೈ ಬಂದರು ಮೂಲಕ ಮಲೇಶಿಯಾದ ಕೌಲಾಲಂಪುರ್ ಮಾರುಕಟ್ಟೆಗೆ ಕಳುಹಿಸಿಕೊಡಲಾಗಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 900 ರೂಪಾಯಿ ಸಿಗುತ್ತಿದ್ದ ಈ ಈರುಳ್ಳಿಗೆ ರಫ್ತು ಮಾಡಿದ ಕಾರಣಕ್ಕೆ ರೈತರಿಗೆ ಪ್ರತಿ ಕ್ವಿಂಟಾಲ್ ಗೆ 1300 ರೂಪಾಯಿ ಸಿಕ್ಕಿದೆ.